ಅಂಜನಾಸುತ ವರದ | ವಿಠಲ ಪೊರೆ ಇವನಾ ಪ
ಕಂಜಜನಯ್ಯ ಹರಿ | ಸಂಜೆ ಚರಹರನೇ ಅ.ಪ.
ಕರ್ಮ | ಮಾಡಿ ಮಾಡಿಸುತಾಮತಿರಹಿತ ಜೀವನಿಗೆ | ಫಲ ಎಂಬ ತೆರಮಾಳ್ವೆಕೃತುಭುಜನೆ ಈ ತರಳ | ನುದ್ಧಾರಗೈಯ್ಯೊ 1
ಆದ್ಯಂತರಹಿತ ಸ | ದ್ಬುದ್ಧಿಗಳ ಪ್ರೇರಕನೆಶ್ರ್ರದ್ಧಾಳು ಎನಿಸಿವನ | ಮಧ್ವಮತದಲ್ಲೀಪದ್ಧತಿಯ ಪ್ರಕಾರ | ಬದ್ದನಾಗಿಹದಾಸಶುದ್ಧ ದೀಕ್ಷೆಯಲಿವನ | ಉದ್ಧರಿಸೋ ದೇವ 2
ಉತ್ತಮಾಧಮರೆಂಬ | ತತ್ವ ತರತಮ ತಿಳಿಸಿಆರ್ಥಿಯಿಂದಿವನ ಭಾವ | ಉತ್ತರಿಸೊ ಹರಿಯೇ |ಕತೃ ಸರ್ವಕೆ ನೀನೆ | ಅತ್ಯಂತ್ಯ ಆಪ್ತ ತಮಮತ್ತೊಬ್ಬರಿಲ್ಲಿವಗೆ | ಸ್ತುತ್ಯ ಶ್ರೀಹರಿಯೇ 3
ಕಂಸಾರಿ ತವತಾಮಶಂಸನಕೆ ಎಡೆಗೊಟ್ಟು | ಸಲಹ ಬೇಕಿವನಾಅಂಶ ಅವತಾರಗಳ | ಶಂಸನದಿ ತವಪಾದಪಾಂಸುವನೆ ಭಜಿಪಂಥ | ಸನ್ಮತಿಯನೀಯೊ 4
ಸತ್ಸಂಗ ದೊರಕಿಸುತ | ಕುತ್ಸಿತರ ದೂರಗೈಮತ್ಸ್ಯಧ್ವಜ ಪಿತ ಶ್ರೀ | ವತ್ಸಲಾಂಛನನೇನಿತ್ಯ ತವ ಸಂಸ್ಮರಣೆ | ಇತ್ತುಪಾಲಿಪುದಿವನಚಿತ್ಸುಖಪ್ರದ ಗುರು | ಗೋವಿಂದ ವಿಠಲಾ 3