ವಿಬುಧ ಪ್ರಿಯ ವಿಠಲ | ಶುಭದ ಪೊರೆ ಇವನಾ ಪ
ಅಬುಜ ಜಾಂಡೋದರನೆ | ಕುಬುಜೆ ಸದ್ ವರದಾ ಅ.ಪ.
ದಾಸನಾಗಲು ಇವಗೆ | ಆಶೆ ಪ್ರೇರಕನಾಗಿವಾಸು ದೇವಾಖ್ಯ ತೈ | ಜಸನೆ ಕಾರ್ಯರೂಪಿಸೂಸಿತವ ರೂಪವನು | ಲೇಸಾಗಿ ತೋರಿಸೆಹೆಕೇಶವನೆ ಅದನೆ ಉಪ | ದೇಶಿಸಿಹೆ ಹರಿಯೆ 1
ಪ್ರೀಯ ಅಪ್ರೀಯ ಉ | ಭಾಯಾನು ಭವದಲ್ಲಿಆಯುತನು ನೀನಾಗಿ | ಉದ್ವೇಗ ಕೊಡದೇನಿಯುತಕರ್ಮದಿ ರತನ | ದಯದಿಂದ ನೀಮಾಡಿಹಯಮೊಗಾಖ್ಯ ಹರಿಯೆ | ಕೈಯಪಿಡಿ ಇವನಾ 2
ಲೋಕವಾಕ್ಯದಿ ವಿರಸ | ಲೋಕೈಕನಾಥನುವಾಕ್ಯದೊಳು ರತಿಯನ್ನೆ | ನೀ ಕೊಟ್ಟಿ ಕಾಯೋ |ಮಾಕಳತ್ರನದಾಸ | ಸಂಕುಲದಿ ಸದ್‍ಭಕ್ತಿಶ್ರೀಕರನೆ ನೀನಿತ್ತು | ಸಾಕ ಬೇಕಿವನಾ 3
ಮಧ್ವಮತದಲಿ ದೀಕ್ಷೆ | ಶುದ್ಧ ಹರಿ ಗುರುಭಕ್ತಿಅದ್ವೈತ ಕ್ರಯವರಿಯೆ | ವಿದ್ಯೆ ಸಂಘಟಿಸೀಕೃದ್ಧಖಳ ನಿವಹಗಳ | ಪ್ರಧ್ವಂಸಗೈಯುತಲೀಉದ್ದರಿಸೋ ಇವನನ್ನು | ಮಧ್ವಾಂತರಾತ್ಮ 4
ವೇದ ಕದ್ದೊಯ್ದವನ | ಬಾಧೆ ನೀ ಪರಿಹರಿಸಿಸಾದುಗಳ ಪೊರೆದಂತೆ | ಆದರಿಸಲಿವನಾಮೋದಿ ಗುರು ಗೋವಿಂದ | ವಿಠಲನೆ ಬಿನ್ನವಿಪೆಮೈದೊರಿ ಸಲಹುವುದು | ಸಾಧುವಂದಿತನೇ 5