ನೀ ದಯಾಪರನೊ, ನಿನ್ನವರ ಸಾಧನವೊ ? |ಮುದ್ದು ಹಯವದನ ಪೇಳಿದನ ಪ.ಮದಕರಿಯು ಸರಸಿಯೊಳು ಮಕರಿಬಾಧೆಗೆ ಸಿಲುಕಿ |ಪದುಮಾಕ್ಷ ಪದುಮೇಶ ಪದುಮನಾಭ ||ಪದುಮಸಂಭವನಯ್ಯಪಾಹಿ ಪಾಹಿ - ಯೆನಲು |ಒದಗಿ ರಕ್ಷಿಸದೆ ತವ ದಯೆಯೊ, ಸಾಧನವೊ ? 1ಅಂತ್ಯಜೆಯ ಸಹವಾಸದಲಿ ವಿಪ್ರವರನೊಬ್ಬ |ಸಂತಸದಿಂದ ಬಹುಕಾಲ ಕಳೆದು ||ಅಂತ್ಯಕಾಲಕೆ ತನ್ನ ಮಗನ ಕರೆಯಲು ಕಾಯ್ದೆ |ಚಿಂತಾಯತನೆ, ವೈರಾಗ್ಯ ಸಾಧನವೊ ? 2ಅವರವರ ಯೋಗ್ಯತೆಯನರಿತು ಪ್ರೇರಕನಾಗಿ |ಅವರಿಂದ ನುಡಿಸಿ ನುಡಿನುಡಿಗೆ ಹಿಗ್ಗಿ ||ಅವರಿಗೊಲಿದೆ ನಮ್ಮ ಪುರಂದರವಿಠಲ |ಅವನೀಶನಿನ್ನ ದಯವೊ ಸಾಧನವೊ ?3