ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮುರಳಿಯ ಧ್ವನಿಯು ಕರೆಯುತಲಿರುವುದು ಪೋಗುವ ಬಾರೆ ಸಖಿ ಪ ಪೋಗುವ ಬಾರೆ ಸಖಿ ಬೇಸರ ನೀಗುವ ಬಾರೆ ಸಖಿ ವಿಧ ವಿಧ ಭೋಗವ ಪಡುವ ಸಖೀ ಅ.ಪ ವರವಂಶದಿ ಜನಿಸಿದ ಭಾಗ್ಯವ ಈ ಮುರಳಿಯು ತಂದಿತು ಕೇಳೆ ಸಖಿ ಪರಮ ಪ್ರೇಯಸಿ ಇವಳಂತರಂಗವ ಮರೆ ಮಾಚುವ ರಸಿಕಾಗ್ರಣಿ ಕೃಷ್ಣನ 1 ಕ್ಷೀರಶರಧಿತನಯಳ ವೈಭವ ಈ ನೀರಸಳಿಗೆ ಇದು ಅಚ್ಚರಿಯು ಕೋರಿ ಚುಂಬಿಸುವ ಕೃಷ್ಣನಧರ ಸುಧೆ ಧಾರೆಯೊ ಸೂರೆಯೊ ಶೌರಿಯ 2 ಹುಲ್ಲೆ ಹುಲಿಯ ಭಯ ತೊರೆದು ಕೇಳುತಿದೆ ಕಲ್ಲು ಕರಗಿ ಮೃದುವಾಗಿರುವಂತೆ ನಲ್ಲೆ ಎನ್ನ ಹೃದಯವು ಕರಗಿತು ನಾ ನಿಲ್ಲಿ ಎನ್ನ ಮನವಲ್ಲಿ ಪ್ರಸನ್ನನ 3
--------------
ವಿದ್ಯಾಪ್ರಸನ್ನತೀರ್ಥರು