ಒಟ್ಟು 9 ಕಡೆಗಳಲ್ಲಿ , 5 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನ ಬಿನ್ನಪ ಕೇಳೊ ಘನ್ನ ಮಹಿಮನೆ ಭವ ಬನ್ನ ಬಡಿಸುತಲಿಹುದೋ ಸ್ವಾಮಿ ಪ ಇನ್ನು ನೀ ಪೊರೆಯೊ ಅಪನ್ನಜನರಾಪಾಲ ಮನ್ನಿಸಿ ಕಾಯೊ ಸ್ವಾಮೀ ಪ್ರೇಮೀ ಅ.ಪ ಆಗಾಮಿಸಂಚಿತಭೋಗಂಗಳು ಎನ್ನ ಯೋಗ ಮಾರ್ಗಕೆ ಪೋಗದಂತೆ ಹೇಗೆ ಮಾಡಿ ಙÁ್ಞನನೀಗೆ ನಿನ್ನಲಿ ಮನಸು ಯೋಗವನು ಮಾಡಗೊಡದೇ ಜಾಗುಮಾಡುತ ಪರಮಭಾಗವತರಲಿಸದಾ ಆಗಮಗಳ ತಿಳಿಯದೇ ಹೀಗಾಗಿ ನಾನು ಅಯೋಗ್ಯನೆನಿಸೀ ಜಗದಿ ಕಾಗಿಯಾಗಿ ತಿರುಗಿದೇ ಸ್ವಾಮಿ 1 ಹೆತ್ತ ಈ ಮೊದಲು ಮತ್ತಾರು ಜನರಿಲ್ಲ ಹೊತ್ತಿಗೇ ಕರೆದನ್ನವೀವರಿಲ್ಲಾ ಗೊತ್ತು ಸ್ಥಳಗಳು ಇಲ್ಲ ವೃತ್ತಿ ಸ್ವಾಸ್ಥ್ಯಗಳಿಲ್ಲ ಚಿÉತ್ತ ಶುದ್ಧಿಯು ಮೊದಲೆ ಇಲ್ಲಾ ಎತ್ತ ಪೋದರೆನ್ನ ಇತ್ತ ಬಾಯೆಂತೆಂದು ಹತ್ತಿರ ಕರೆವೊರಿಲ್ಲ ಎತ್ತ ಪೋದರೆನ್ನ ಮತ್ತೆ ಪಾಲಿಪರ್ಯಾರೊ ಉತ್ತಮನೆ ನೀನೆ ಕಾಯೋ ಸ್ವಾಮೀ 2 ಗರ್ಭವಾಸದಕಿಂತ ದುರ್ಭರಾಭವತಾಪ ನಿರ್ಭರಾವಾಗಿಹುದೋ ಅರ್ಭಕಾಮತಿಯಿಂದ ಅಭರ್Àಟಾ ಕಾರ್ಯವನು ನಿರ್ಭಯದಿ ಮಾಡಿದೆನೊ ಗರ್ಭ ನಾ ದೂತ ನೀ ನಿರ್ಭಯವ ಕೊಡದಿರಲು ಲಭ್ಯವೇ ಸರ್ವಕಾರ್ಯಾ ಲಭ್ಯ ಶ್ರೀಪತಿ ನೀನು ಲಭ್ಯನಾಗದಿರೆ ವೈ ದÀರ್ಭಿರಮಣಾ ಕಷ್ಟವೋ ಸ್ವಾಮಿ 3 ಉಡುವ ವಸ್ತ್ರಗಳಿಲ್ಲ ಒಡಲಿಗಶನವು ಇಲ್ಲ ಕೊಡುವ ಧನ ಮೊದಲೆ ಇಲ್ಲ ಪೊಡವಿಯೊಳು ನಾನತೀ ಬಡವನಲ್ಲದೆ ಮಹಾ ಕಡು ಪಾಪಿಯಾದೆನಲ್ಲೋ ತುಡುಗುತನದಲಿ ಪರರ ಮಡದಿಯರ ನಾ ಬಲು ದೃಢಮನಸಿನಿಂದ ಬಯಸಿ ಧೃಢ ಭಕುತಿಯಿಂದ ಅಡಿಗೆರಗದಲೆ ನಾನು ಪೊಡವಿಭಾರಾದೆನಲ್ಲೋ ಸ್ವಾಮೀ 4 ಓದಿ ಬರೆಯಾಲಿಲ್ಲ ವೇದ ಪಠಿಸಾಲಿಲ್ಲ ಮೋದತೀರ್ಥರ ಶಾಸ್ತ್ರ ತಿಳಿಯಲಿಲ್ಲಾ ವಾದಶಾಸ್ತ್ರಗಳಿಲ್ಲ ಭೇದಪಂಚಕವಿಲ್ಲ ಸಾಧನದ ಮಾರ್ಗವಿಲ್ಲ ಖೇದಗೊಳಿಸುವ ಭವದ ಹಾದಿ ತಿಳಿಯದೆ ನಾನು ಮೋದಕÀರವೆಂದು ಅಲ್ಲೀ ಸಾದರದಿ ಬಿದ್ದು ಆಮೋದಬಡುತಲಿ ದ್ವಿ ಪಾದಪಶು ನಾನಾದೆನಲ್ಲೋ ಸ್ವಾಮೀ 5 ಸತಿಸುತ ಮೊದಲಾದ ಅತಿಹಿತ ಜನರೆನ್ನ ಸತತ ಸಂತ್ಯಜಿಸಿಹರೋ ವಿತತವಾಗಿಹ ಮಹಾಪತಿತದಾರಿದ್ರ್ಯನ್ನ ಅತಿಬಾಧೆ ಬಡಿಸುತಿಹದೋ ಇತರ ಜನರೂ ಎನ್ನ ಅತಿದÀೂರದಲಿ ನೋಡಿ ಅತಿಹಾಸ್ಯ ಮಾಡುತಿಹರೋ ವ್ರತತಿಜಾಂಬಕÀ ನಿನ್ನ ನತಿಸಿ ಬೇಡಿಕೊಂಬೆ ಸತತ ನೀ ಪಾಲಿಸೆಂದೂ ಸ್ವಾಮೀ 6 ತಂದೆ ತಾಯಿಯೂ ನೀನೆ ಬಂಧು ಬಳಗವು ನೀನೆ ಇಂದು ಸಿಂಧು ಒಳಗೆ ಬಿದ್ದೆ ಮುಂದಕ್ಕೆ ಕರೆದು ಕಾಯೋ ಸುಂದರಾಂಗನೆ ಕೃಪಾಸಿಂಧು ನೀ ಬಿಡೆ ಎನ್ನ ನೊಂದದಲೆ ಸಲಹೊರ್ಯಾರೋ ಸ್ವಾಮಿ 7 ಹೊಟ್ಟೆಗಿಲ್ಲದೆ ನಾನು ಬಟ್ಟೆ ಹಾಸೀ ನರರಿ ಗ್ವಟ್ಟರಿಸಿ ಒದರುತಿಹೆನೋ ಪುಟ್ಟದಿರಲೂ ಅನ್ನ ಸಿಟ್ಟಿನಿಂದಾ ನಾಯಿ ಬೆಟ್ಟಕ್ಕೆ ಒದರಿ ತಾನೂ ಹೊಟ್ಟೆಯುಬ್ಬೀ ಕೊನೆಗೆ ಹೊರಳಿ ಹೊರಳಿ ತಾನು ಸುಟ್ಟ ಬೂದಿಲಿ ಬೀಳ್ವ ತೆರದೀ ಒಟ್ಟು ಮಾತಿದು ಕೃಪಾವಿಟ್ಟು ನೀ ಎನ್ನನು ಥsÀಟ್ಟನೇ ಕರಪಿಡಿದು ಕಾಯೋ ಸ್ವಾಮೀ 8 ನಿನ್ನ ದಾಸನು ಆಗಿ ಅನ್ಯರನ ಬೇಡಿದರೆ ಘನ್ನತೆಯು ನಿನಗುಂಟೇ ಘನ್ನ ಜನಪನ ತನುಜ ಇನ್ನು ದೈನ್ಯದಿ ತಾನೆ ಅನ್ಯರನು ಬೇಡುವುದು ಉಂಟೇ ಚೆನ್ನ ಸುಮನಸ ಧೇನು ಮುನ್ನ ಮನೆಯೊಳಿರೆ ಗೋ ವನ್ನು ಬಯಸುವರುಂಟೇ ಇನ್ನು ಪೇಳುವದೇನು ಎನ್ನಭವಣೇ ತಿಳಿದು ಇನ್ನು ಕಾಯಲಿ ಬೇಕೋ ಸ್ವಾಮೀ ಶುದ್ಧಮಾರ್ಗವ ಬಿಟ್ಟು ಬದ್ಧ ಭವಸಾಗರವೆ ಉದ್ಧಾರ ಮಾಳ್ಪದೆಂದೂ ಶಿದ್ಧಜನರಾ ಸೇವೆಗೆ ಬದ್ಧನಾಗದೆ ದುರಾ ರಾಧ್ಯ ಜನರನ್ನು ಭಜಿಸೀ ಉದ್ಧರಿಸುವೊ ಶ್ರೀ ಮಧ್ವಸಿದ್ಧಾಂತದ ಸೂ ಪದ್ಧತಿಯನ್ನೆ ಬಿಟ್ಟೂ ಸಿದ್ಧಮೂರುತಿ ಎನ್ನ ¥ದ್ಧಗಳ ಎಣಿಸದಲೆ ಉದ್ಧಾರಮಾಡೊ ಸ್ವಾಮೀ ಪ್ರೇಮೀ 10 ದಾತ ನೀನೇ ಎನ್ನ ಮಾತುಲಾಲಿಸಿ ಭವದ ರತಿಯನ್ನೇ ಬಿಡಿಸಿ ಕಾಯೋ ಪೊತನಲ್ಲವೆ ನಿನಗೆ ಆತುರದಿ ನಾನೀ ರೀತಿಯಿಂದಲಿ ಪೇಳಿದೆ ಯಾತರಾ ಮಾತೆಂದು ನೀ ಪ್ರೀತಮನಕೇ ತರದೆ ತಾತನೂಕೀ ಬಿಟ್ಟರೆನ್ನಾ ಸೋತುಬಂದಾ ನಿನಗೆ ಆತುರಾವ್ಯಾಕೆಂದು ನೀತವಾಗೀ ಕಾಯ್ವರಾರೋ ಸ್ವಾಮೀ 11 ಮಾತೆ ಮಕ್ಕಳಿಗೆ ವಿಷದಾತೆಯಾಗೇ ತಂದೆ ಪೋತರ ಮಾರಿದಾರೆ ದಾತನಾದಾ ರಾಜ ಆತುರಾದಿಂದಲಿ ನಿಜ ದೂತರರ್ಥಪಹಾರಮಾಡೆ ನೀತಸತಿಯು ತನ್ನ ನಾಥನಾಯು ತಾನೆ ಘಾತವನೆ ಮಾಡಿದಾರೆ ನೀತವೇ ನಿನಗಿದಕೆ ಯಾತರಾ ಚಿಂತೆ ಈ ಮಾತಿನಂತೆ ನಿನಗೆ ಪ್ರೀತೇ ಸ್ವಾಮೀ ಎಷ್ಟು ಪೇಳಲಿ ಎನ್ನ ಕಷ್ಟರಾಶಿಗಳೆಲ್ಲ ಶ್ರೇಷ್ಟವಾಗಿರುತಿಹವೊ ಸ್ವಾಮೀ ದುಷ್ಟನಾದರು vನ್ನ ಭ್ರಷ್ಟಮಗನನು ತಾಯಿ ಅಟ್ಟೀಸೂವಳೆ ಅಡವಿಗೆ ಎಷ್ಟು ಕೆಟ್ಟವ ನಾನಾರಿಷ್ಟನಾದರು ಕೃಪಾ ದೃಷ್ಟಿಯಿಂದಲಿ ನೋಳ್ಪಳೋ ನಷ್ಟದೈವ ನಾನರಿಷ್ಟ ಅಙÁ್ಞನಿ ಕರುಣಾ 13 ದೃಷ್ಟಿ ಯಿಂದಲಿ ನೋಡಿ ಸಲಹೋ ಸ್ವಾಮೀ ಕುಟಿಲ ಖಳಮತಿಯು ನಟಿನೆಮಾಡುತ ಭವಲಂ ಪಟದೊಳಗೆ ಬಿದ್ದಿಹೆನೂ ಸ್ವಾಮೀ ಶಠÀತರನು ನಾನತಿಕಠಿಣಮನಸೀನಿಂದ ಧಿಟಜ್ನಾನಿದ್ರೋಹಗೈದೆ ದಿಟರಿಲ್ಲ ಎನಗೆಂದು ನಟಿಸುತ್ತ ಸರ್ವದ ಅಟನೆಮಾಡಿದೆ ಸರ್ವರಲ್ಲಿ ಪಟುತರನು ನಾನೆಂದು ಧಿಟಗುರುಜಗನ್ನಾಥ ವಿಠಲ ದೇವಾ ನಿನ್ನ ಮರೆದೆ ಸ್ವಾಮೀ 14
--------------
ಗುರುಜಗನ್ನಾಥದಾಸರು
ನಿನಗೆ ಅಚ್ಚರವಲ್ಲ ಅನುಮಾನಸಲ್ಲಾ ಇನಿತು ಶ್ರಮ ಕಳೆಯದಿರೆ ಘನತಿಲ್ಲ ನಿಮದಲ್ಲ ಪ ಹಿಂದೆ ನಿನ್ನ ಅಜ್ಞಾ ನಾ ಒಂದು ಮೀರಿದಕೆ ನೀ ಇಂದು ಭವಭವಣೆ ಬಹುಪರಿಯಿಂದಲೀ ತಂದು ನೋಯಿಸಿ ಮನಸುನಿಂದದಲೆ ಪರರಿಗೆ ಇಂದು ಮೊರೆಯನು ಹೋಗಿಸುವುದು ಥರವೇ ಹರಿಯೇ 1 ಒಂದು ತಿಳಿಯದಲೆ ನಾನು ಅಂದ ಮಾತಿಗೆ ಮನಸು ನೊಂದು ಈ ತೆರದಿ ಮಾಡುವುದು ರೀತೇ ಕಂದನಪರಾಧಗಳ ಒಂದು ನೋಡದ ಜನನಿ ಯಂದದಲಿ ನೀ ಪಾಲಿಸುವುದು ಸ್ವಾಮೀ ಪ್ರೇಮೀ 2 ಜಾತಮಗನನು ನಿಜತಾತ ಪರರಿಗೆ ತಾನು ಆತುರಾದಿಂದಲಿ ಮಾರಿದಂತೆ ದೂತರನು ಜಗದೇಕÀನಾಥ ನೀ ಪರಿಪರಿ ಫಾತಿಸಲು ಇನ್ನಾರು ಪೊರೆªರೈಯ್ಯಾ ಜೀಯಾ 3 ನಂಬಿದವರನ್ನು ನೀ ಅಂಬಿನಲಿ ಹೊಡೆವರೆ ಅರಿ ಪದುಮ ಗದಧರಪಾಣಿಯೆ ತುಂಬಿದ್ಹರಿಗೋಲಲ್ಲಿ ಇಂಬುಗೊಂಡಿರುವಾಗ ಅಂಬುಧಿಮುಣುಗಿಸುವದು ಥರವೇನೋ 4 ಯಾತಕೀಸೊ ಮಾತು ಸೋತೆ ನಾ ನಿನಗೀಗ ವಾತದೇವನ ತಾತ ಸೀತಾನಾಥಾ ನೀತ ಶ್ರೀಗುರುಜಗನ್ನಾಥ ವಿಠ್ಠಲರೇಯ ಮಾತು ಲಾಲಿಸಿ ಪಾಲಿಸುವದು ಇನ್ನಾ ಚೆನ್ನಾ 5
--------------
ಗುರುಜಗನ್ನಾಥದಾಸರು
ನಿನ್ನ ದಾಸನಿವನೇ ಅನನ್ಯ ರಕ್ಷಕÀನೇ ಪ ಅನ್ಯರಿಗಾಲ್ಪರಿಯದಂತೆ ಮನ್ನಿಸಿ ಪೊರಿ ಧ್ವರಿಯೇ ಅ.ಪ ಅನ್ಯನಲ್ಲವೊ ಸ್ವಾಮಿ ಮನ್ನಿಸೀ ಪೊರಿ ಪ್ರೇಮೀ ಘನ್ನವಿಪತ್ತಿವಗೆ ಬಹುಬನ್ನಬಡಿಸುತಿಹುದೋ 1 ಬಂದ ವಿಪತ್ತನ್ನು ಈಗ ಛಿಂದಿಸಿಬಿಡು ವೇಗ ಬಂದಾದುರಿತಗಳೆಲ್ಲ ನೀ ನಿಂದ್ರಾದಂತೆ ಮಾಳ್ಪದೋ 2 ಅನ್ಯರಿUಸಾಧ್ಯವಿದು ಎನ್ನ ಮನಕೆ ತೋರುತಿಹದು ನಿನ್ನನುಳಿದು ಕಾಯ್ವೊರಾರಾಪಾನ್ನ ಜನಪಾಲಾ 3 ಇನ್ನು ಸಂದೇಹವ್ಯಾಕೆ ಘನ್ನ ಮಹಿಮಬೇಡಿಕೊಂಬೆ ನಿನ್ನ ಸೇವಾ ನಿರುತವಿತ್ತು ಎನ್ನವಚನ ಲಾಲಿಸಯ್ಯಾ 4 ಭುವನದೊಳಗೆ ಬಪ್ಪೊದಯ್ಯ ತಾನೆ ಪ್ರೀತನಾಗುವನು 5
--------------
ಗುರುಜಗನ್ನಾಥದಾಸರು
ಬಂದು ಸಂಸಾರದಿ ನೊಂದು ತಾಪತ್ರಯದಿ ಬೆಂದು ಕಂದಿ ಕುಂದಿದೆ ದೇವಾ ಪ ಪರಮ ಕರುಣಿಯೆ ನಿನ್ನ ಶರಣು ಪೊಕ್ಕಾ ಜನರ ಪರಿಪಾಲಿಪನೆಂಬ ಬಿರಿದೊ ಅರಿದೂ ನೀನೆ ಮೆರೆಯದಲೆ ಸಲಹÀಬೇಕೆನ್ನ ನಿನ್ನ ಚರಣನೀರಜಯುಗ್ಮವನ್ನಾ ತೋರಿ ಹರುಷವನೆ ನೀಡೆಲೋ ಮುನ್ನಾ ಘನ್ನ ಪರಮಭಕುತಿ ವಿರಕುತಿ ನೀನೆ ಎನಗಿತ್ತೆನ್ನ ಹರುಷದಲಿ ಪಾಲಿಸೈಯ್ಯಾ ಜೀಯಾ 1 ಮಾನುಷಾಧಮ ನಾನು ಹೀನಮತಿಯಲಿ ನಿನ್ನ ಧ್ಯಾನವನು ಮಾಡದಲೆ ಬರಿದೆ ಜರಿದೆ ಇಂಥ ಹೀನಭವದೊಳಗೆ ಬಾಯಿದೆರದೆ ದಿವ್ಯ ಜ್ಞಾನಿಜನರನ್ನು ನಾ ಜರಿದೆ ಙÁ್ಞನ ಹೀನನಾಗಿ ಕಾಲಕಳೆದೆ ಇನ್ನು ಶ್ರೀನಿವಾಸನೆ ನಿನ್ನ ಧ್ಯಾನ ಮಾಡುವೆನೋವಿ - ಜ್ಞಾನವನೆ ಪಾಲಿಸಯ್ಯಾ ಜೀಯಾ 2 ಈಸುವತ್ಸರ ನಿನ್ನುಪಾಸನವ ಮಾಡದಲೆ ರಾಸಭಾನಂತೆ ಬದುಕಿದೆ ದೇವಾ ಈಗ ವಾಸವಾಗೆಲೋ ಮನದಿ ಸ್ವಾಮೀ ನಾನು ಈಸಲಾರೆನು ಭವದಿ ಪ್ರೇಮೀ ಎನ್ನ ಆಸೆ ಪೂರ್ತಿಸೊ ಅಂತರ್ಯಾಮಿ ಇನ್ನು ಎಸುವಿಧದಲಿ ಸರ್ವೇಶ ಪೇಳಲಿ ಮುನ್ನೆ ಈಶ ಭವಶ್ರಮ ಕಳಿಯೋ ಈಗಾ ವೇಗಾ 3 ಆವ ಕರ್ಮದಲಿಂದ ಈ ವಸುಮತಿಯಲ್ಲಿ ಈ ವಿಧಾದಿಂದ ಬಂದೆ ನಿಂದೆ ನಿನ್ನ ಸೇವಕಾನಲ್ಲವೆ ತಂದೆ ಎನ್ನ ಆವಾಗ ನೋಡುವಿಯೊ ಮುಂದೆ ಈಗ ಕಾವವನಾರು ನಾ ಎಂದೆ ವೇಗ ದೇವ ನಿನ್ನಯ ಪಾದಸೇವೆ ಸುಖವನು ಇತ್ತು ಆವ(ಅವ)ರಂತೆ ಪೊರೆಯೊ ಎನ್ನಾ ಚೆನ್ನಾ 4 ಉರಗಾದ್ರಿ ನಿಲಯನೆ ವರಭೋಗಿಶಯನನೆ ಪರಮಪುರುಷನು ಎಂದು ಮೊರೆಯಾ ಇಡುವೆ ನಿನ್ನ ಪರಿಪರಿಯ ಜನರನ್ನು ಪೊರೆವೆ ಎನ್ನ ತಿರಸ್ಕಾರ ಮಾಡುವುದು ಥsÀರವೇ ನಿನ್ನ ಮರಿಯಾದೆಯಲ್ಲಮರತರುವೇ ಕೃಪಾ ಕರನೇ ಸರ್ವರಿಗು ಸರಿಯಾಗಿ ಇರುತಿರುವಿ ಗುರುಜಗನ್ನಾಥ ವಿಠಲಾ ವತ್ಸಲಾ 5
--------------
ಗುರುಜಗನ್ನಾಥದಾಸರು
ಬಿಟ್ಟಿನ್ನಾರ ಕಾಡುವೆನೂ ಪ ಪಾರು ಮಾಳ್ವರ ಕಾಣೆನೂ | ಎನ್ನನೂ ಅ.ಪ ಇಂದುವದನ ನಿನ್ನಾಮರೆಯ ಸಾರ್ದೆ ತಂದೆಯಂತೆ ಎನ್ನಾ - ನಂದದಿ ತಪ್ಪುಗಳೊಂದೆಣಿಸದೆ ಪೊರೆ - ಯೆಂದು ನಾ ಬೇಡುವೆನೂ ಕಾಲ್ಪಿಡಿವೆನು 1 ಭಕ್ತೋದ್ಧಾರಿ ಸುಗುಣೆ ಪ್ರೇಮೀ | ಘೋರ ದುರಿತವೆಂಬಪಾರಮಡುವಿನೊಳು ಸೇರಿ ಮುಳುಗಿದೆನು ನಾನು | ಪಿಡಿದೆತ್ತು ನೀನು2 ಮಾಡುವೆನೂ ದಾಸನು ನಾನು 3
--------------
ಬೆಳ್ಳೆ ದಾಸಪ್ಪಯ್ಯ
ಶರಣೆಂಭೆ ತನುಮನದಿಂದ ಗಣರಾಯಾ ನರಮೃಗ ಕಾಯಾ ಸುರಾಸುರರ ಕೈಯ್ಯ ಸೇವೆ ಕೊಳುವ ಚರಣವನು ಮೊರೆಯ ಹೊಕ್ಕೆನು ಕೇಳಿ ಕೀರುತಿಯಾ ಕೊಂಡಾಡುವಂತೆ ಪದ ಪದ್ಯದಿ ನಿನ್ನ ಚರಿಯಾ ಶುಭ ಮುಖ ಕೊಡುಮತಿಯನಾ ಎಂದೆಂದು ನೊಡಲು ಅಪರಾಧಿನಾ ಮೊದಲು ಕುಂದನಾರಿ - ಸದೇ ನೋಡೆನ್ನ ಮ್ಯಾಲಿನ್ನಾ ಅಗಜ ನಂದನ ಗುರು ಮಹೀಪತಿ ಸುತ ಸ್ವಾಮಿ ಭಕುತ ರಕ್ಷಕ ಮುನಿಜನ ಪ್ರೇಮೀ
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸತ್ಯ ಸಂಕಲ್ಪ ಸ್ವಾತಂತ್ರ ಸರ್ವೇಶ ಸರ್ವೋತ್ತಮನೆ ಸಾರ್ವಭೌಮಾ ಪ ಭೃತ್ಯರಿಗೆ ಬಂದ ಪರಿಪರಿ ಭಯಗಳನೆ ಕಳೆದುನಿತ್ಯದಲಿ ಕಾಯ್ವ ಸ್ವಾಮೀ ಪ್ರೇಮೀ ಅ.ಪ. ಆವ ಜನುಮದ ಫಲವೊ | ಆವ ಕ್ರಿಯಗಳಿಂದಆವ ಸಾಧನದ ಬಗೆಯೋ ||ಆವುದಿಂದಾವುದಕೆ ಘಟನೆಯನು ಮಾಳ್ಪೆಯೊಆವುದೊ ನಿನ್ನಾಟವೋ ||ಆವ ಪರಿಯಿಂದಲ್ಲಿ ಜೀವಿಗಳ ಸಲಹುವಿಯೊಆವ ನಿನ್ನಾಧೀನವೋ |ದೇವ ದೇವೇಶ ನಿನ್ನ | ಭಾವ ಬಲ್ಲವರಾರೊಭಾವಜನ ಪಿತ ಕೃಪಾಳೊ | ಕೇಳೋ 1 ತೈಜಸ ಪ್ರಾಜ್ಞ ವಿಶ್ವರೂಪಗಳಿಂದಸ್ವಪ್ನ ಕಾಲದಲಿ ನೀನೂ ||ಸುಪರ್ವಾಣ ದೈತ್ಯರ ಸೃಜಿಸಿ ಮನೆಯನು ಮಾಡಿಅಪರಿಮಿತ ಕಾರ್ಯಗಳನೂ |ಸುಫಲ ದುಷ್ಕರ್ಮಗಳ ತೋರಿಸೀ ಜೀವಕ್ಕೆಕ್ಲುಪುತವಾಗಿದ್ದವೆಲ್ಲಾ |ಕೃಪೆಯಿಂದ ತೋರಿ ಬದಾಪತ್ತುಗಳ ಕಳೆವಅಪರಿಮಿತ ಸಾಗರಾ | ಶೂರಾ 2 ಎನ್ನಂಥ ಪಾಪಿಷ್ಠರಿನ್ನಿಲ್ಲ ಧರೆಯೊಳಗೆ ನಿನ್ನಂಥ ಕರುಣಿಯಿಲ್ಲಾ ||ಚೆನ್ನಗುರು ವಿಜಯರಾಯರ ಪೊಂದಿದವನೆಂದೂಮನ್ನಿಸಿ ಸಲಹಬೇಕೋ |ಘನ್ನ ಸಂಸಾರದೊಳು ಬವಣೆ ಬಂದಟ್ಟಿದರುನಿನ್ನ ಸ್ಮøತಿಯೊಂದು ಬರಲೀ |ಸನ್ನುತಾಂಗಿಯ ರಮಣ ವ್ಯಾಸವಿಠಲ ಮಧ್ವಮುನಿಗೊಲಿದೆ ಉಡುಪಿವಾಸಾ | ಶ್ರೀಶಾ 3
--------------
ವ್ಯಾಸವಿಠ್ಠಲರು
ಸ್ವಾಮಿಯ ನೋಡುವ ಬನ್ನಿ ನಮ್ಮ ಸುಪ್ರೇಮೀಯ ನೋಡುವ ಬನ್ನಿ ಪ ಎಂಟು ಮೈಯವನಂತೆ ಎಸೆವೈದು ಮುಖವಂತೆ ಯರ್ದಾಂಗಿಯ ಪಡೆದಿಹನಂತೆ ಅಂತ ಸ್ವಾಮಿಯ ನೋಡುವ ಬನ್ನಿ 1 ಮಾಧವನೆ ಶರವಂತೆ ಭೂಧರನೆ ಧನುವಂತೆ ಭೂಮೀಯೇ ರಥವಂತೆ ಸೊಮ ಸೂರ್ಯರೇ ಗಾಲಿಗಳಂತೆ ಅಂತ ಸ್ವಾಮಿಯ ನೋಡುವ ಬನ್ನಿ 2 ವಾಜಿ ವೇದಗಳಂತೆ ಒದನೊದಗಿ ಬಹವಂತೆ ಅಮೃತ ಶರಧಿಯ ಅಲ್ಲಿ ಬತ್ತಳಕೆಯಂತೆ ಅಂತ ಸ್ವಾಮಿಯ ನೋಡುವ ಬನ್ನಿ 3 ಹರಿಯವರ ಶರವಂತೆ ಅಜನು ಸಾರಧಿಯಂತೆ ದುರುಳ ತಾರಕ ಸುತರ ಪುರವ ಮುರಿದಿಹನಂತೆ ಅಂತ ಸ್ವಾಮಿಯ ನೋಡುವ ಬನ್ನಿ 4 ಇದುವೆ ಭೂ ಕೈಲಾಸವೆಂದು ತೋಷದಿ ಬಂದು ಸಾಕಾರವಾಗಿಲ್ಲ ನೆಲಸಿಹರಂತೆ ಮುದದಿ ಲೋಕಗಳೆಲ್ಲ ಕೈವಶವಂತೆ ಅಂತಸ್ವಾಮಿಯ ನೋಡುವಬನ್ನಿ 5
--------------
ಕವಿ ಪರಮದೇವದಾಸರು