ನಂಬು ನಮ್ಮ ಹರಿಯ ನಂಬಿದ-
ರಿಂಬುದೋರುವ ದೊರೆಯಾ
ವಿಶ್ವ ಕು-
ಟುಂಬಿ ವಾಯು ಪೂಜ್ಯಾಂಬುಜ ಪಾವನ ಪ.
ಕಾಮಧೇನು ಕಲ್ಪತರು ಚಿಂತಾಮಣಿಯಿಂದಪ್ಪ
ಕಾಮಿತಾರ್ಥವೆಲ್ಲ ನಿರವಧಿ ಪ್ರೇಮಿಸಿ ಕೊಡಬಲ್ಲ
ನಿತ್ಯ ಕಥಾಮೃತ ಸೇವಿಸಲು
ಪಾಮರ ಜನಕೆ ಸ್ವಧಾಮವನೀವನ 1
ದುರಿತರಾಶಿಗಳನು ನಿಮಿಷದಿ ತರಿವನು ಮಾಧವನು
ಸ್ಮರಿಸುವ ದಾಸರನು ಮರೆಯದೆ ಕರುಣಿಸಿ ಸಲಹುವನು
ಚರಣಾಂಬುಜ ಕಿಂಕರಾಗಿರುವರು
ಕರೆದಲ್ಲಿಗೆ ಬಂದಿರುವ ಮಹಾತ್ಮನ 2
ಶ್ರೀ ಭೂಮಿಸಹಿತ ಕೈವಶನಾಗುವ ಗುಣಭರಿತಾ
ಯೋಗಿ ಮನೋನುಗತ ಶ್ರೀಮದ್ಭಾಗವತಾಂತಗತಾ
ನೀಗಿ ನಿಖಿಳಭವ ರೋಗವ ಶರಣ ಮ-
ನೋಗತ ಸಲಿಸುವ ಭೋಗ ಗಿರೀಶನ 3