ಕಾಲಭೈರವ ಸ್ವಾಮಿಯೆ ಭಕ್ತಜನ-
ರಾಳಿಗೆ ಸುಪ್ರೇಮಿಯೆ ಪ.
ಮೂರ್ಲೋಕದೊಳು ಹರಿಲೀಲೆ ಕೊಂಡಾಡುವ
ಶೀಲರ ಕಾವ ಕೃಪಾಳುವೆ ಜಯ ಜಯ ಅ.ಪ.
ರುದ್ರನಾಮಕ ಹರಿಯ ಪಾದಭಕ್ತಿ-
ಮುದ್ರಾಂಕಿತ ನೀನಯ್ಯ
ಬುದ್ಧಿಜ್ಞಾನ ಸಂಸಿದ್ಧಿಸುತೆಮ್ಮನು
ಉದ್ಧರಿಸುವ ಸುಪ್ರಸಿದ್ಧ ಮಹಿಮ ನಿನ್ನ
ಹೊಂದಿದೆನು ಶಾಂತೀರಮಣನನಿ-
ರುದ್ಧನಂಘ್ರಿಸರೋಜ ಸ್ಮರಣೆ ಸ-
ಮೃದ್ಧಿಯನು ನೀನಿತ್ತು ಒಳಹೊರ-
ಗಿದ್ದು ಕಾಯೊ ಸುಭದ್ರದಾಯಕ 1
ಕಾಮಕ್ರೋಧ ಮುಂತಾದ ವೈರಿಜನ-
ಸ್ತೋಮದಿಂದ ಬಹಳ ಬಾಧಾ
ಶ್ರೀಮನೋರಮನ ಸುನಾಮಸ್ಮರಣೆಯನ್ನು
ಪ್ರೇಮದಿಂದಿತ್ತು ಸುಕ್ಷೇಮದಿಂ ಪೊರೆಯೆಂದು
ವ್ಯೋಮಕೇಶನೆ ಧೀಮತಾಂವರ
ಸೋಮಧರ ಸುತ್ರಾಮವಂದಿತ
ತಾಮರಸಸಖ ತೇಜ ಸುಜನರ
ಕಾಮಧೇನು ಮನೋಮಯನೆ ಜಯ 2
ಲಕ್ಷ್ಮೀನಾರಾಯಣನ ದಾಸಾರ್ಯ ಫಾ-
ಲಾಕ್ಷ ಮಹೇಶಾನ
ಸೂಕ್ಷ್ಮಸ್ಥೂಲದೊಳ್ಪರೀಕ್ಷಕನಾಗಿ ವಿ-
ಪಕ್ಷದವರನು ಶಿಕ್ಷಿಸಿ ಶಿಷ್ಟರ
ರಕ್ಷಿಸುವ ಸದಯಾದ್ರ್ರಹೃದಯ ಮು-
ಮುಕ್ಷುಪ್ರಿಯ ಗುರುವರ್ಯ ಲೋಕಾ-
ಧ್ಯಕ್ಷ ದಕ್ಷಮುಖಾಂತರ ಕರು-ಣೇಕ್ಷಣದಲಿ ನಿರೀಕ್ಷಿಸೆಮ್ಮನು3