ಶ್ರೀವರ ಕೀರ್ತಿಯಂ ಅರ್ಥಿಯಿಂದಾಲಿಸೈ ಚಿತ್ತಶುದ್ಧಿಯಿಂ ಪ
ಭಾವಿಸಿವಾರ್ತೆಯ ವ್ಯಾಸ ವಾಲ್ಮೀಕಿಯು
[ಆವರ]ಶುಕ ಮನುಶ್ರೇಷ್ಠರೆಲ್ಲ ನಿತ್ಯಪಠಿಪರೋ ಅ.ಪ
ಘೋರಾರಣ್ಯದಿ ತಿರುಗುತ್ತ
ಶೌರ್ಯದಿ ಗೋಗ್ರಹಣವನು ಸಾಧಿಸುತಲಿ
ಮೀರಿ ಸಂಧಿಕೇಳದ ದುರ್ಯೋಧನರ ಹತಗೈದ 1
ರಾಮನು ಕಾಡೊಳು ಮೃಗವನು ಮರ್ದಿಸಿ
ಭೂಮಿಜೆಯಂ ತರೆ ರವಿಜನಿಂ
ಆ ಮಹಾಸಾಗರವನು ಬಂಧಿಸಿ ಲಂಕಾ
ಪ್ರೇಮಿಯನ್ನು ಕೊಂದು ಬಂದ ರಾಮಚರಿತಮಂ2
ದೇವಕಿಸುತ ಗೋಪೀಗೃಹವರ್ಧನ
ಗೋವರ್ಧನಗಿರಿಯೆತ್ತಿದ
ಮಾವಕಂಸಾದಿ ದುರ್ದೈತ್ಯರ ಖಂಡಿಸಿ
ಸೇವಿಸುವ ಸಿಂಧುಗಳ ಸಲಹುವ ಜಾಜೀಶನು 3