ಎಲೆ ಮನಾ ವ್ಯರ್ಥಗಳೆವರೇ ಜನುಮವನು |
ನೆಲಿಯ ನಿನ್ನರುವದಾ ಹೊಲಬು ಮರೆದು ಪ
ಇಳಿಯೊಳಗ ನರದೇಹದಲಿ ಜನಿಸಿ ಕೊಡುವದು |
ಸುಲಭವಲ್ಲವೊ ಹೋದ ಬಳಿಕ ನಿನಗದು ಮುಂದ ಅ.ಪ
ಮೇದಿನಿಯೊಳಗ ಮಿಗಿಲಾದ ಜನ್ಮದಿ ಬಂದು|
ಐದಿದಾವರ್ಣ ಕರ್ಮಾಧರಿಸಿ ಮಾಡುತಲಿ |
ಗೈದು ನಿತ್ಯಾನಿತ್ಯ ವೈದಿಕ ವಿಚಾರವನು |
ಆದಿ ಪುರುಷನ ಕಾಂಬ ಹಾದಿ ಕೂಡಿ |
ಖೇದವನು ಕುಡುವ ವಿವಾದ ಗುಣವನೆ ನೀಗಿ |
ಮೋದದಲಿ ಶರಣ್ಹೊಕ್ಕು ಸಾಧು ಜನರನು ಸರಿಸಿ |
ವೇದಾಂತ ಬ್ರಹ್ಮ ಸೂತ್ರಾದಿ ವಾಕ್ಯಾರ್ಥವನು 1
ಬೋಧೆಯಲಿ ಪಡೆದು ಜ್ಞಾನೋದಯ ಕಾಣದೆ
ಭವ ಶರಧಿಯನು ಗೆಲಲಾಗಿ |
ಶರಣ ಜನರಿಗೆ ತೆಪ್ಪ ಪರಿಯಂದಾತಾಗಿಹ |
ಹರಿನಾಮವ ನೆನೆದು ಹರಿಧ್ಯಾನಗೈವುತಲಿ |
ಹರುಷದಲಿ ಪದಿನಾರು ತೆರ ಪೂಜಿಸಿ |
ಪರಮ ಸದ್ಭಾವದಲಿ ಗುರುಡಿಂಗರ ಮೇಳದಲಿ |
ಭರದಿ ತಾಳದಂಡಿಗೆಯ ಕರದೊಳಗ ತಾ ಪಿಡಿದು |
ಶರೀರ ಭಾವನೆ ಮರೆದು ಭರಿತ ಪ್ರೇಮಿತನಾಗಿ |
ಇರಳು ಹಗಲು ಪಾಡುತಲಿ ಹರಿಭಕ್ತನಾಗದೇ 2
ವನಧಿಯೊಳು ಥೆರೆಸಂಗ ಧನುಮತದಿದೋರ್ವ |
ಗುಳ್ಳಿಯ ಪರಿಸೇವೆಯೀತನು ವೆಂದು-ದರಿಯು |
ಆನದೊಳಗ ಉತ್ಕ್ರಷ್ಟ ತನದಿ ಮೆರೆಸ್ಯಾಡುತಿಹ |
ಕನಕದಧಿದೇವಿ ಕಿವಿಯನು ಬೀಸುವಾಗ |
ಅಣುಗ ಕರಿಯಂತೆ ಅರಕ್ಷಣದವಳು ಯಂದು ಅತಿ |
ಹೆಣಗುತಿಹ ಸಾಯಾಸವನೆ ತ್ಯಜಿಸಿ ತಾ ದೊರಕಿ |
ಧನಿತದರಿಂತುಷ್ಟವನು ಕರಿಸಿ ದೃಢದಿಂದ |
ಘನ ನಂಬು ಗುರು ಮಹಿಪತಿ ಚರಣ ಬಿಡದಂತೆ 3