ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೆಳಗೋಣು ಹರಿಗೆ ಆರುತಿಯ | ಸಂಗೀತಹಾಡಿ ಪಾಡಿ ನಲುವಿಂದ ಬೇಗ ಬಾರೆ ನಳಿನಾಕ್ಷಿ ಬಾ ಪ ಬಾಲೆ ಶೀಲೆ ದ್ರೌಪದಿ ಭಕುತಿಲಿ ಧ್ಯಾನಿಸಿ ಧೇನಿಸಿ ಕೇಳಿ ಅಕ್ಷಯಶಾಲಿ ಗರೆದ ದೇವ ದೇವಗೆ || ಶೈಲವನೆತ್ತಿದಾತಗೆ | ಗೋಪಗೆ | ಬಹುರೂಪನಿಗೆ | ಶೃಂಗಾರ ಸುಗುಣಾಂಬುಧಿಗೆ ಜಯಶುಭ ಮಂಗಳೆಂದು 1 ದೀನೋದ್ಧಾರಿ ಧೇನುಕ ಮಾತುವೈರಿಗೆ | ಶೌರಿಗೆ | ವೇಣುನೂದುತ ಗೋವ್ಗಳ ಸಲುಹಿದಾತಗೆ ನಾಥಗೆ | ಮಂದರ ಕರುಣಾತರಗೆ 2 ಭಾಸುರ ಶಾಮಸುಂದರವಿಠಲ ಸ್ವಾಮಿಗೆ | ಪ್ರೇಮಿಗೆ | ವಾಸವಾತ್ಮಜಗೆ ಒಲಿದು ಧುರದೊಳು ಕಾಯ್ದಗೆ ಶ್ರೀದಗೆ || ವಾಸುಕಿತಲ್ವಶಾಯಿಗೆ | ಗೋಪಗೆ | ಬಹುರೂಪನಿಗೆ | ದಾಸರ ಒಡನಾಡುವಗೆ | ಜಯಶುಭ ಮಂಗಳೆಂದು 3
--------------
ಶಾಮಸುಂದರ ವಿಠಲ
ಮಂಗಳ ಮಹಿಮ ಶುಭಾಂಗಗ ಮಂಗಳ ಅಂಗಜ ಜನಕ ಶ್ರೀರಂಗಗ ಮಂಗಳ ಪ ಸಿರಿದೇವಿ ಮುಖಪದ್ಮ ಭಂಗಗ ಮಂಗಳ ಸುರ ಮುನಿಜನ ರಂಗ ಸಂಗಗ ಮಂಗಳ ಶರಣಾಗತರ ಭವಭಂಗಗ ಮಂಗಳ ದುರಿತಾಳಿವ್ಯಾಳ ವಿಹಂಗಗ ಮಂಗಳ 1 ಯಾದವ ಕುಲಾಂಬುದಿ ಚಂದ್ರಗ ಮಂಗಳ ಕೈಟಭಾರಿ ಮಹೀಂದ್ರಗ ಮಂಗಳ ವಿಧಿಭವ ವಂದ್ಯ ನಾದುಪೇಂದ್ರಗ ಮಂಗಳ ಸದಮಲಸದ್ಗುಣಸಾಂದ್ರಗ ಮಂಗಳ 2 ನಾರದಗಾಯನ ಪ್ರೇಮಿಗೆ ಮಂಗಳ ಸುರಸಾದಾಸಾಸಿರ ನಾಮಿಗೆ ಮಂಗಳ ಗುರುವರ ಮಹಿಪತಿಸ್ವಾಮಿಗೆ ಮಂಗಳ ಕರುಣಾಳು ಜಗದಂತ್ರಯಾಮಿಗೆ ಮಂಗಳ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮಹಿಮನಿಗೆ ನಮಸ್ಕಾರ ಬ್ರಹ್ಮಾನಂದದಿ ಸಮರಸವಾದ ಸಪ್ರೇಮಿಗೆ ನಮಸ್ಕಾರ ಕಾಮಕ್ರೋಧಗಳೆಂದು ನಿಷ್ಕಾಮದಿ ನೇಮದಲಿಹಗೆ ನಮಸ್ಕಾರ ಶಮೆದಮೆದಲಿ ಸಮದೃಷ್ಟಿಗೂಡಿಹ ಸ್ವಾಮಿ ಸೇವಿಗೆ ನಮಸ್ಕಾರ 1 ಆಶಿ ತಿಳಿದು ನಿರಾಶೆಯೊಳಿಹ ಉದಾಸಿಗೆ ನಮಸ್ಕಾರ ಸುಮಿಲೊಂತಕಗೆ ನಮಸ್ಕಾರ ಸೂಸಿ ತುಳುಕದೆ ಕಾಸಿನಾಶೆಗೆ ಹರಿದಾಸರಿಗೆ ನಮಸ್ಕಾರ 2 ಹೆಚ್ಚು ಕುಂದನೆ ರಚ್ಚಿಗೆ ತಾರದ ಸ್ವಚ್ಛಲಿಹಗೆ ನಮಸ್ಕಾರ ಕಚ್ಚಿ ಕೈ ಬಾಯಿಲಿ ಹುಚ್ಚಾಗದ ನಿಶ್ಚಲೇಂದ್ರಿಗೆ ನಮಸ್ಕಾರ ಮತ್ಸರಳಿದು ನಿರ್ಮತ್ಸರೊಳಿಹ ಸುನಿಶ್ಚಿತನಿಗೆ ನಮಸ್ಕಾರ ಮೆಚ್ಚಿ ಘನದೊಳು ಇಚ್ಛೆಲಿಹ ಮಹಾ ಎಚ್ಚರಿಗೆ ನಮಸ್ಕಾರ 3 ನಾ ನೀನೆಂಬುವ ನುಡಿ ನೀಗಿನ ಅನುಭವಿನಗೆ ನಮಸ್ಕಾರ ಖೂನ ತಿಳಿದಿಹ ಸ್ವಾನುಭವದ ಸುಙÁ್ಞನಿಗೆ ನಮಸ್ಕಾರ ತಾನೆ ತಾನಾಗಿಹ ಘನದೊಳು ನಿರಾಶನಿಗೆ ನಮಸ್ಕಾರ ಮೌನದಲಿ ನಿಜಸ್ಥಾನದಲಿರುವ ಸುದಾನಿಗೆ ನಮಸ್ಕಾರ 4 ಗರ್ವವಳಿದು ಸರ್ವವೇ ನಿಜ ತಿಳಿದ ನಿಗರ್ವಗೆ ನಮಸ್ಕಾರ ತೋರ್ವ ಕರದೊಳು ಅರ್ವನುಭವನಿರ್ವಾಣಿಗೆ ನಮಸ್ಕಾರ ನಿರ್ವಾಹದ ಸುಪರ್ವಾಣಿಯ ಫಲ ಇರ್ವನಿಗೆ ನಮಸ್ಕಾರ ಸರ್ವಸುಖ ಸುರಿಸಿದ ಮಹಿಪತಿ ಶ್ರೀಗುರುವಿಗೆ ನಮಸ್ಕಾರ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾಧು ಆದವ ಸಾಧುರ ಬಲ್ಲನೋ | ಸಾಧು ವೇಷದಿ ಮೆರೆವವ ಸಲ್ಲನೋ ಪ ಧರಿಯೊಳು ಲೋಕದಿ ಸರೀ | ಹೊರವಳಿ ನಡತಿಯ ತೋರಿ | ಅವ | ತೋರಿ ತೋರದಲಿಹನೋ 1 ಯೋಗಿ | ಭೋಗಿಗೆ ಭೋಕ್ತನೂ ಆಗಿ | ಆವ | ಆಗಿ ಆಗದಲಿಹನೋ 2 ಗುರುವರ ಮಹಿಪತಿಸ್ವಾಮಿ ಅರಿತಾ ನಂದದ ಪ್ರೇಮಿ | ಅವ | ಪ್ರೇಮಿ ಪ್ರೇಮಿಗೆ ವಲಿವನೋ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಆರೆಅವನಾರೆಲೆ ಜಾಣೆಆರೆಅವನಾರೆವೀರಹಕ್ಕಿಯನೇರಿ ನಿರುತದಿ ಧ್ವನಿಗೈದುವ ಶ್ರೀಪತಿ ಕಾಂಬೆ ಪ.ಬಾಹಭಾವವ ನೋಡೆ ಕರುಣಿಯ ಬಾಹುಬಂದಿಯ ನೋಡೆದೇಹ ಮಾಟವ ನೋಡೆ ಕರುಣಾಬ್ಧಿ ಸ್ನೇಹ ನೋಟವ ನೋಡೆಆಹೇಮಾಂಬರನೋಡೆ ಮುಕುಟವಿಟ್ಟಿಹಕುಂಡಲನೋಡೆರೂಹ ನೋಡಿ ಮೈ ಮರೆವ ಮುನಿಸಮೂಹದೆಡಬಲದರ್ಥಿಯ ನೋಡೆ 1ಆಭರಣದ ಕಾಂತಿ ಕಂಡ್ಯಾ ಮೃಗನಾಭಿ ತಿಲಕವ ಕಂಡ್ಯಾಶೋಭಿಸುವ ನಾಮ ಕಂಡ್ಯಾಕೌಸ್ತುಭಶ್ರೀವತ್ಸ ಕಂಡ್ಯಾತ್ರಿಭುವನ ಗರ್ಭ ಕಂಡ್ಯಾ ತ್ರಿವಳಿಯ ನಾಭಿ ಚೆಲ್ವಿಕೆ ಕಂಡ್ಯಾಶ್ರೀ ಭುಜಂಗವೇಣಿ ಲಕುಮಿಯಳ ತಾ ಬಿಗಿದಪ್ಪೊವಕ್ಷವÀ ಕಂಡ್ಯಾ 2ಸ್ವಾಮಿಗೆ ಮನಸೋತೆನೆ ಭಕ್ತಪ್ರೇಮಿಗೆ ಮನಸೋತೆರಾಮನಿಗೆ ಮನಸೋತೆ ನಾ ಘನಶ್ಯಾಮನಿಗೆ ಮನಸೋತೆವಾಮನಗೆ ಮನಸೋತೆನೆ ಪೂರ್ಣಕಾಮನಿಗೆ ಮನಸೋತೆಶ್ರೀ ಮನೋಹರ ಪ್ರಸನ್ವೆಂಕಟೇಶನ ನಾಮಕೆ ಮೆಚ್ಚು ಬಿದ್ದುಮನಸೋತೆ 3
--------------
ಪ್ರಸನ್ನವೆಂಕಟದಾಸರು