ಕೇಶವಾಚ್ಯುತ ಮಾಧವಾನಂತ|ಶ್ರೀ ಶಕಮಲದಳೇಕ್ಷಣಾ|
ವಾಸುದೇವ ಮುಕುಂದ ಮುರಹರ ಕ್ಲೇಶಹರಣ ಜನಾರ್ಧನಾ||
ವಾಸುಕಿಯ ಪರಿಯಂಕನೆನುತಲಿ|ನೆನೆವನಾವ ನರೋತ್ತಮಾ|
ಮೋಸಹೋಗದಿರವರೊಳೆಂದು|ಚರರಿಗ್ಹೇಳಿದನೈಯಮಾ 1
ರಾಮರಾಘವ ರಾಜಶೇಖರ|ರಾವಣಾಸುರಮರ್ದನಾ|
ಶಾಮಸುಂದರ ಸಕಲ ಗುಣನಿಧಿ|ಶಬರಿಪೂರಿತ ವಾಸನಾ
ಭೂಮಿಜಾಪತಿ ಭೂತನಾಥ|ಪ್ರಿಯನೆಂಬ ನರೋತ್ತಮಾ|
ಪ್ರೇಮಿಕನ ನುಡಿಸದಿರಿಯೆಂದು|ಚರರಿಗ್ಹೇಳಿದನೈಯಮಾ 2
ಬಾಲಲೀಲವಿನೋದ ಶ್ರೀ ಗೋಪಾಲ ಗೋಕುಲ ಲಾಲನಾ|
ಕಾಲಜಲಧರ ನೀಲಮುರಲೀ ಲೋಲಸುರವರ ಪಾಲನಾ|
ಕಾಲಕಾಲನೆ ಕಂಸಹರನನು ತಾವ ನೆನೆವ ನರೋತ್ತುಮಾ|
ಕಾಲಿಗೆರಗಿರಿ ಅವರಿಗೆಂದು|ಚರರಿಗ್ಹೇಳಿದನೈಯಮಾ 3
ಮಕರಕುಂಡಲ ಕಿರೀಟ ಕೌಸ್ತುಭ|ಕಟಕಕೇಯೂರ ಭೂಷಣಾ|
ಅಖಿಲ ಜಗನುತ ಚರಣಪೀತಾಂಬರನೆ ಶ್ರೀವತ್ಸಲಾಂಭನಾ|
ಪ್ರಕಟಿತಾಯುಧ ಶಂಖಚಕ್ರಗದಾಬ್ಜ ನೆನೆವನರೋತ್ತಮಾ|
ಸುಖಿಸುವವರನು ತ್ಯಜಿಸಿರೆಂದು ಚರರಿಗ್ಹೇಳಿದನೈಯಮಾ 4
ಶ್ರವಣಪೂಜನೆ ಸ್ಮರಣಕೀರ್ತನೆ ವಂದನೆದಾಸ್ಯದಿ ಸಖ್ಯವಾ|
ಬಿಡದನಾವನರೋತ್ತುಮಾ|
ಅವನ ಸೀಮೆಯ ಹೋಗದಿರೆಂದು ಚರರಿಗ್ಹೇಳಿದನೈಯಮಾ 5
ಯಾರಮನೆಯಲಿ ತುಲಸಿವೃಂದಾವನದಿ ಶಾಲಿಗ್ರಾಮವು|
ಚಾರುದ್ವಾದಶನಾಮ ಹರಿಚಕ್ರಾಂಕಿತದ ಶುಭಕಾಯವು|
ಮೀರದಲೆ ಹರಿದಿನದ ವ್ರತದಲಿ ನಡೆವನಾವನರೋತ್ತಮಾ|
ದಾರಿ ಮೆಟ್ಟದಿರೆಂದು ತನ್ನಯ ಚರರಿಗ್ಹೇಳಿದನೈಯಮಾ 6
ಸಾಧುಸಂತರು ಬಂದರೆರಗುತ ಪಾದೋದಕದಲಿ ಮೀವನು|
ಆದಿನವಯುಗ ವಾದಿಚತುರ್ದಶ ಪರ್ವಕಾಲಗಳೆಂಬನು|
ಸಾದರದಿ ಹರಿಪೂಜೆಯಿಂದರ್ಚಿಸುವ ನಾವನರೋತ್ತಮಾ|
ಮೋದದಿಂದಲಿ ಬಾಗಿರೆಂದು ಚರರಿಗ್ಹೇಳಿದನೈಯಮಾ 7
ಅಂದು ಹೇಳಿದ ಕಥೆ ರಹಸ್ಯದ ಹರಿಯನಾಮದ ಮಾಲಿಕಾ|
ತಂದೆ ಮಹೀಪತಿ ಎನ್ನ ಮುಖದಲಿ ನುಡಿಸಿದನು ಭೋಧಾಷ್ಟಕ|
ತಂದು ಮನದಲಿ ಭಕುತಿಯಿಂದಲಿ ನೆನೆವನಾವನರೋತ್ತಮಾ|
ಇಂದು ಜೀವನ್ಮುಕ್ತನಮಗಿನ್ನೇನು ಮಾಡುವನೈಯಮಾ 8