ಕರುಣವ ಮಾಡೊ ಶರಣರ ಪ್ರೇಮಿಕರುಣವ ಮಾಡೊ ಅರುಣನಿಭನೆ ಗುರು | ಕರುಣವ ಮಾಡೊ ಪ
ಸುರ ತರುವಿನ ಅನುಸರಿಸಿದ ಮನುಜಗೆ ಮೃಷ್ಟಾನ್ನದ ಬರವೆಸುರನದಿ ಅನುಸರಿಸಿದ ಮನುಜಗೆ ಘನ ತೃಷಿಯ ಬಾಧೆ 1
ಕಾಮಧೇನು ತನ್ನ ಧಾಮದೊಳಗೆಯಿರೆ ಸೀಮೆ ಆಳುವರಾಸೆರಾಮನ ಪದಯುಗ ತಾಮರಸವನಂಬೆ ಪಾಮರರಂಜಿಕೆಯೆ 2
ವ್ರಜತಾಧಿಪ ವೇಣುಗೋಪಾಲ ವಿಠಲನ್ನ ನಿಜವಾಗಿ ಸ್ಮರಿಸುವರಕುಜನ ದಲ್ಲಣ ಗುರು ವಿಜಯದಾಸರೆ ಸ್ಮರಿಸುವರೆಯಿವರ3