ನೆನಿ ಮನವೇ ಪಾವನ ದೇವನ ಚರಿತ ಕಥನುವೇ |
ನಿನಗಿದ-ವನಿಲಿ ನೆಚ್ಚಿರೆ ತನುವೇ ಪ
ಘನ ಶ್ಯಾಮನದಯ ಪಡಿಯದ ಸಾರ್ಥಕ |
ಜನುಮಗಳೇವದಿದು ಗುಣವೇ ಅ.ಪ
ಸುರಲೋಕ ಮೊದಲಾದ ಸುರಪ ವಿಚ್ಛೈಸಿ |
ಪರಿ ಸಾಧನ ಮಾಳ್ಪರೆ |
ಸುರಭಿಯಿರಲು ವಿಡಿಸದ ಪುಳಿ ಪಾಲವ |
ಕರೆಸುವೆನೆಂದು ಅರಸುವರೇ 1
ಗುರು ಶರಣ ನಿಷ್ಠೆಯೊಂದ್ಹಿಡಿಯದೇ ಕಂಡಾ |
ಧರೆಯ ದೈವಕ ತಲೆವಾಗುವರೇ |
ಸುರ ತರುವಿನ ನೆರಳವನೇ ತ್ಯಜಿಸಿ | ಬ|
ರ್ಬುರ ದ್ರುಮವನು ಸಾರುವೇ 2
ವಿಕಳಿತ ಮಾಡುವ ತಾಪತ್ರಯದಾ |
ಸಕಲ ಹಳಾಹಳ ತ್ಯಜಿಸೀ
ಅಖಿಳ ಜೀವನದೊಡಿಯನ ಸದ್ಮೂರ್ತಿಯ |
ಹೃತ್ಕಮಲದೊಳಗಿರಿಸೀ 3
ಹರಿಮಹಿಮೆಯ ಕೊಂಡಾಡುತ ಪೊಗಳುತ |
ಬೀರುತ ಗುರು ಭಕುತರಿಗೇ |
ಪರಮ ಸದ್ಭಾವದ ಭಕುತಿಲಿ ಮುಣುಗೈನ |
ವರತ ಪ್ರೇಮಾರ್ಣವದೊಳಗೇ 4
ನಯನದಿಂದಲೀ ಸ್ಮರಿಸುವ ಬಹು ಶರಣರ |
ಭಯವ ನಿವಾರಣ ಮಾಡುವ |
ದಯದಲಿ ಮಹಿಪತಿ ನಂದನ ಪಾಲಿಸು |
ತಿಹಕರುಣಾಕರ ಮಾಧವಾ 5