ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವನಜಾಕ್ಷ ಎನಗ್ಯಾಕೆ ಘನತರ ಅಪರಾಧ ಎನಗೆ ಆಧೀನವೇನು ವಿಶ್ವವ್ಯಾಪಕ ನೀನೆ ಪ ನಾ ನುಡಿವುದೆಲ್ಲ ನಿನ್ನ ನಿಜವಾದ ಮಂತ್ರವು ನಾ ನಡೆವುದೆಲ್ಲ ನಿನ್ನ ಯಾತ್ರವೆಲೋ ದೇವನೆ ನಾ ಬೇಡುವುದೆಲ್ಲ ನಿನ್ನ ವಿಮಲಾತ್ಮ ಪ್ರಸನ್ನತೆ ನಾ ತೊಡುವುದೆಲ್ಲ ನಿನ್ನ ಪರಮಕೃಪಾಕವಚ 1 ನಾನುಂಬುವುದೆಲ್ಲ ನಿನ್ನ ಕರುಣ ಪ್ರಸಾದವು ನಾ ಕುಡಿವುದೆಲ್ಲ ನಿನ್ನ ಚರಣ ಉದಕವಯ್ಯ ನಾ ಬಯಸುವುದೆಲ್ಲ ನಿನ್ನ ಪ್ರೇಮಾಮೃತವು ನಾನಿರುವುದೆಲ್ಲ ನಿನ್ನ ಭಜನಮಂದಿರವು 2 ನಾ ಕೇಳುವುದೆಲ್ಲ ನಿನ್ನ ಧರ್ಮಕಥಾಶ್ರವಣವು ನಾ ಪೇಳ್ವುದೆಲ್ಲ ನಿನ್ನ ಚರಣಸುಚರಿತ ನಾನು ಮಾಡುವುದೆಲ್ಲ ನಿನ್ನ ಪೂಜೆಯು ನಾನನುಭವಿಪುದು ಎಲ್ಲ ಶ್ರೀರಾಮನಾಟವು 3
--------------
ರಾಮದಾಸರು