ಹರಿದಾಟ ನಿಲಿಸು ಮನದಘದೂರ ಸುಖಸಾರ
ಎರಗುವೆನು ತವಪದಕೆ ಸ್ಮರಿಸಿ ನಿಮ್ಮುಪಕಾರ ಪ
ಸಂತಸವ ಕೊಡು ಎನ್ನ ಅಂತರಂಗದಿ ನಿಂತು
ಕಂತುಪಿತ ಚಿಂತಿಪರ ಚಿಂತಾಮಣಿ ಪ್ರಭುವೆ 1
ಅಲ್ಪಮನಸಿನ ಕುಕಲ್ಪನೆಯ ಪರಿಹರಿಸು
ಅಲ್ಪರಿವ ದೀನರಿಗೆ ಕಲ್ಪತರು ನೀನು 2
ನಾಮಾಡಿದಪರಾಧ ಪ್ರೇಮದಿಂ ಕ್ಷಮಿಸು ಶ್ರೀ
ರಾಮ ಮಮಪ್ರಾಣೇಶ ಪ್ರೇಮಾಬ್ಧಿನಿಲಯ 3