ನಂದಿವಾಹನಾ ಪಾಲೀಸೊ ನೀ | ಕಂದ ನೆಂದನಾ ಪ
ಕಂದು ಗೊರಳ ಮೌ | ಳೆಂದು ಶಿಖರ ಅಮರೇಂದ್ರ ಮುಖರು ಸುರ | ವೃಂದ ವ್ಯಂದ್ಯ ಪದಅ.ಪ.
ನಂದ - ನಂದನಾ - ಪ್ರಿಯ ಸಖ | ಮಂದಜಾಸನಾಕಂದ ನೆನಿಸಿ ದುರ್ | ವೃಂದ ತ್ಯಜಿಸಿ ತವತಂದೆ ಯಾಜ್ಞೆಯಲಿ | ನಿಂದು ಸರಿದ ಹರ 1
ದಿತಿಸುತ | ಸ್ತೋಮ - ಪ್ರೀಯನೇ ||ಶಾಮ ಸುಂದರ ಹರಿ | ಪ್ರೇಮಾನ್ವಿತ ಸುತಕಾಮಾರಿಯೆ ಹರ | ಸಾಮಜವಾಸಾ 2
ಸೇವ್ಯ ನಂಘ್ರಿ ದಶದಿವ್ಯ ಕಲ್ಪ ತಪ | ಗೈಯ್ಯೆ ಶಯ್ಯನಾದೆ 3
ಯೋಗಿ ರೂಪ ಭವರೋಗ ವೈದ್ಯ ಹೃ | ದ್ರೋಗ ಕಳೆಯೊ ಶಿವ4
ಗೌರಿ ಮನೊ - ಹರಾ - ಕೈಲಾಸವಾಸ | ಕೈರಾತಾ ಕೃತಿಧರಾ ||ಗಿರಿ ಇಂದ್ರ ಕೀಲದಿ | ಘೋರ ತಪಸಿ ನರಸಾರೆ ನಿನ್ನ ಪದ | ಶೂರ ಪಡೆದ ಶರ 5
ಶುಕ | ಲಿಂಗಾಕಾರನೇ ||ತುಂಗ ಮಹಿಮ ನಿ | ಸ್ಸಂಗ ಹರಿಯ ದ್ವಿತಿಯಂಗ ಡಮರು ಶೂ | ಲಿಂಗಳ ಪಿಡಿದಿಹ 6
ತೈಜಸ - ತಾಮಸ | ಸಾಕಾರಿ - ಓಜಸಾ ||ನೀ ಕುಶಾಸ್ತ್ರದಲಿ | ಭೀಕರರನು ಅವಿವೇಕರ ಮಾಡ್ದೆ | ಪಿ | ನಾಕಿ ಧರ ಹರ 7
ರುಂಡ - ಮಾಲನೇ - ಮುನಿಜ ಮೃ | ಕಂಡ - ಪಾಲನೇ ||ಅಂಡಜ ಮಹ ಬ್ರ | ಹ್ಮಾಂಡ ದೊಡೆಯ ಪದಪುಂಡರೀಕದೊಳು | ಬಂಡುಣಿ ಎನಿಸಿಹೆ 8
ಶಂಭೊ - ಶಂಕರ - ಧೂರ್ಜಟೆಯೆ | ಅಂಚೆ - ಮನೋಹರಾ ||ಕಂಬು ಪಾಣಿ ಪದ | ಹಂಬಲಿಸುವೆ ಹೃದಯಾಂಬರದೊಳು ಎನ | ಬಿಂಬನ ತೋರಿಸು 9
ಸೋಮರ್ಕಾನಲ - ಈಕ್ಷಣಾ | ಭೀಮ - ಕೈಕಪಾಲ ||ಭೀಮ ಭವಾಟವಿ | ಧೂಮಕೇತು ಸಿರಿರಾಮ ಪದಾಶ್ರಿತ | ವೈಮನ ಕಳೆಯೊ 10
ಭಾವ - ಜಾರಿಯೇ - ಮುರುಹರ | ರಾವಣಾದಿ - ಪ್ರಿಯಾ ||ಸಾವಧಾನದೊಳು | ಭಾವ ಶುದ್ಧಿಸುತತೋರ್ವುವೆನಗೆ ಗುರು | ಗೋವಿಂದ ವಿಠಲನ 11