ಮಂಗಲಂ ಮಹಾಲಿಂಗ ದೇವನಿಗೆ ಗಂಗೋತ್ತಮಾಂಗಗೆ ಪ.
ತುಂಗಬಲ ಭದ್ರಾಂಗ ಸದಯಾ-
ಪಾಂಗ ಭಕ್ತಜನಾಂಗರಕ್ಷಗೆ
ಅಂಗಜಾರಿ ಕುರಂಗಹಸ್ತಗೆ
ಸಂಗೀತ ಪ್ರೇಮಾಂತರಂಗ ನಿಸ್ಸಂಗಗೆ 1
ವಾಮದೇವಗೆ ವಾಸವಾದಿ ಸು-
ಧಾಮ ವಿಬುಧಸ್ತೋಮ ವಿನುತಗೆ
ವ್ಯೋಮಕೇಶಗೆ ಸೋಮಚೂಡಗೆ
ಭೀಮವಿಕ್ರಮಗೆ ಹೈಮವತಿಪತಿಗೆ 2
ಪ್ರಾಣಪತಿ ಲಕ್ಷ್ಮೀನಾರಾಯಣ-
ಧ್ಯಾನಪರಗೆ ಪಾವಂಜೆಗ್ರಾಮ ಪ್ರ-
ಧಾನಪುರುಷಗೆ ದೀನಜನಸಂ-
ತಾನಗೀಶಾನಗೆ ಜ್ಞಾನಿ ಜಗದ್ಗುರುವಿಗೆ 3