ಮಹಾಬಲಿಪುರ
ಮಹಾಬಲೇಶ್ವರ ಮಾವಳಿಪುರ ಮಿಹಿರಾ
ಸುರುಚಿರ ಪರಾತ್ಪರಾ ಪ
ಮಹೀಸುರಾರ್ಚಿತ ಸದಾಕೃಪಾಕರ
ವಿಹಂಗವಾಹನ ಪೀತಾಂಬರ ಅ.ಪ
ಮಧುಸೂದನ ತವಪಾದುಕಾ ಸಾರದ
ಮಾಧವಿ ಸುಮದಲಿ ಪೂದತ್ತರುದಿಸಿ
ಮೇದಿನಿಯೊಳು ತವಾರಾಧನ ತತ್ವವ
ಬೋಧಿಸುವಂತೆ ನೀಗೈದೆ ಕೃಪಾನಿಧೆ 1
ಶ್ರೀಮದನಂತ ದಿವ್ಯಾಸನಮಂಡಿತ
ಶ್ರೀಮಹೀಸಂಯುತ ಲೋಕವಿಖ್ಯಾತಾ
ಪ್ರೇಮಸುಧಾನ್ವಿತ ಕಾಮಿತದಾತಾ
ಶ್ರೀ ಮಾಂಗಿರಿಪತಿ ಶರಣಸಂಪ್ರೀತಾ2