ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿತ್ಯ ಸು- ಮಂಗಳೆಗತಿಶಯದಿ ಪ ಮಂಗಳಾರತಿ ಎತ್ತಿ ತುಂಗಮಹಿಮ ಶ್ರೀ ರಂಗನ ರಾಣಿಗೆ ಅಂಗನೆ ತುಳಸಿಗೆ ಅ.ಪ. ಕಡಲೊಳು ಸುಧೆ ಹಿಡಿದು | ಬಂದನು ಕಡು ಕರುಣಿಯು ಒಲಿದು ಕುಡಿಗಣ್ಣಿನ ಜಲ ಸಡಿಲಲು ಕಲಶದಿ ಒಡನೆ ಜನಿಸಿದಂತ ಮಡದಿ ಶ್ರೀ ತುಲಸಿಗೆ 1 ಸುರರು ಪೂಮಳೆಗರೆಯೆ | ಹರುಷದಿ ಕರವ ಪಿಡಿಯೆ ವರವನು ಪಡೆದಳು ಶರಣರ ಪೊರೆಯಲು ಧರೆಯೊಳು ಬಂದಿಹ ಕರುಣಿ ಶ್ರೀ ತುಳಸಿಗೆ 2 ನಿತ್ಯ | ಸೇವಿಪ ಸಕಲ ಜನಕೆ ಸತ್ಯ ಭಕುತಿ ಮುಕುತಿಯಿತ್ತು ಸುಕೃತರ ಮಾಡುವ ಲಕುಮಿಕಾಂತನ ಪ್ರೇಮಸಕುತೆ ಶ್ರೀ ತುಳಸಿಗೆ 3
--------------
ಲಕ್ಷ್ಮೀನಾರಯಣರಾಯರು