ಕೆರೆಯನು ದಾಟಲು ಅರಿಯದ ಜನ ಭವ
ಶರಧಿಯ ದಾಟುವರೇ ಶ್ರೀ ನರಹರೆ ಪ
ಕರವ ಪಿಡಿಯದಿರೆ
ತೊರೆಯ ಸೇರಲಳವೆ ಈ ಧರೆಯೊಳು ಅ.ಪ
ಹಲವು ಜನ್ಮಗಳಲಿ ಗಳಿಸಿದ ಅಘಗಳ
ಅಲೆಗಳೊಳಗೆ ಸಿಲುಕಿ ಸಂತತ
ಮುಳುಗಿ ಮುಳುಗುತ ಕಟುಜಲಗಳ ಕುಡಿಯುತ
ನಳಿನನಾಭ ನಿನ್ನೊಲಮೆಯಿಂದಲ್ಲದೆ1
ಕಾಮ ಕ್ರೋಧ ಮದ ಲೋಭ ಮೋಹ
ಮತ್ಸರಗಳೆಂಬ ವಿವಿಧ ಜಲಚರ
ನಕ್ರ ತಿಮಿಂಗಿಲವಿರಲಾಗಿ
ಕಾಮಜನಕ ನಿನ್ನ ಪ್ರೇಮವÀ ಪೊಂದದೆ 2
ಚೂರ್ಣಗಳಾದುವು ವಿವಿಧ ನಾವೆಗಳೀ
ಅರ್ಣವದಲಿ ಸಿಲುಕಿ ಸುಲಭದಿ
ಪೂರ್ಣ ಪ್ರಮತಿಗಳ ಮತವನರಿತು ಇನ್ನ
ಪೂರ್ಣ ಪ್ರಸನ್ನತೆ ನಾವೆಯಿಂದಲ್ಲವೆ 3