(ಈ) ಸರ್ವದೇವತಾಸ್ತುತಿಗಳು
1. ಶಂಕರ
ಭಾಗವತಾಗ್ರೇಸರಾ ಶಿವಶಂಕರ
ಭಾಗವತ ಪ್ರಿಯಂಕರ ಪ
ಯೋಗಿ ಹೃತ್ಪದ್ಮಸ್ಥಿತ ಆಗಮನುತ ವಿಶ್ವನಾಥ
ಶ್ರೀಗಣಪತಿ ಷಣ್ಮುಖ ಪಿತ ಭಾಗ್ಯದಾತ ಪ್ರಖ್ಯಾತ ಅ.ಪ
ಬಾಲಚಂದ್ರಶೇಖರ ಹರ ಭವಹರ
ಕಾಲಕಾಲ ಕಲ್ಮಷಹರ ಕರುಣಾಕರ
ಶೂಲಪಾಣಿ ಡಮರುಗಾಕರ ಬಾಲಗೊಲಿದ ಭಸ್ಮಧರ
ಶ್ರೀಲಲಿತಾ ಮನೋಹರ ನೀಲಕಂಠ ಮಹೇಶ್ವರ 1
ರಾಮನಾಮ ಬೋಧಕ ಭಕ್ತಪ್ರೇರಕ
ಪ್ರೇಮರೂಪ ತ್ರ್ಯಂಬಕ ತ್ರಿಪುರಾಂತಕ
ವಾಮದೇವ ವರಗಿರೀಶ ಕಾಮವೈರಿ ಕೃತ್ತಿವಾಸ
ಶ್ರೀಮಜ್ಜಾಜಿಕೇಶವ ಸ್ವಾಮಿ ಭಜನದಾಯಕವರ 2