ದಯವು ಏತಕೆ ಬಾರದೌ ದೇವಿ
ಭಯವಿಮೋಚನೆ ಭಕ್ತ ಸಂಜೀವಿ ಪ
ಚರಣಕಮಲಕ್ಕೆ ಶಿರವ ಬಾಗಿದೆನೆ
ಸೆರಗನೊಡ್ಡಿ ಪರಮಭಕ್ತಿಲಿ ಬೇಡಿಕೊಂಡೆನೆ
ಕರುಣಭರಿತ ಮೊರೆಯ ಕೇಳ
ದಿರು ವಿಜಯವಾಣಿ
ಪರಮಕಲ್ಯಾಣಿ
ಸರಿಯೆ ನಿನಗಿದು
ಶರಣಜನರ ಕರುಣಾಕರಿ ಅಂಬ
ಪರತರ ಬಿರುದು ಇದೆಯೇನೆ 1
ಮಾರಮರ್ದನರಸಿ ಗಂಭೀರೆ
ಶಾರದಾಂಬೆಯೆ ಮೂರುಲೋಕಂಗಳಿಗೆ ಆ
ಧಾರಿ ಪಾರಮಹಿಮೆಯೆ ತೋರು
ಕರುಣವ ಬೇಗ ವರಗೌರಿ
ಮರೆಯದಿರು ಶೌರಿ
ಚಾರು ಚರಿತವ ಪಾಡಿ ಬೇಡುವೆ
ಸಾರಮನದಿಷ್ಟ ಪೂರೈಸಿದ ರೌದ್ರಿ 2
ಸ್ವಾಮಿ ರಾಮನನಾಮಮಹಿಮರತಿ
ನೀ ಮನವ ಸೋತಿ ಪ್ರೇಮದಿಂದಲಿ ತ್ರಿಜ
ಗನ್ಮಾತೆ ವಿಮಲಚರಿತೆ
ಪ್ರೇಮಮಂದಿರೆ ಭಕ್ತ ವರದಾತೆ ಅಮರಾದಿವಿನುತೆ
ಹೈಮವತಿ ನಿನ್ನ ನಂಬಿ ಭಜಿಸುವೆ ಕ್ಷೇಮಪಾಲಿಸೆನ್ವ್ಯಾಧಿ ಕಳೆದು
ನಾಮರೂಪರಹಿತೆ ವಿಮಲೆ
ಅಮಿತಮಹಿಮಳೆ ಮಮತೆದೋರೆ 3