ತೀರ್ಥಯಾತ್ರೆ ಎಂಬುದು ಇದೆ ನೋಡಿ
ಪಾದ ಕೂಡಿ ಧ್ರುವ
ಭ್ರೂಮಧ್ಯವೆಂಬುದಿದೆ ಕಾಶಿ
ಬ್ರಹ್ಮಸುಖ ತುಳುಕುತಿದೆ ಸೂಸಿ
ನೇಮದಿಂದಲಿ ನೋಡಲು ಧ್ಯಾನಿಸಿ
ಕರ್ಮಪಾಶ ಹೋಯಿತು ಛೇದಿಸಿ 1
ತ್ರೀವೇಣಿ ಸಂಗಮ ಸುಕ್ಷೇತ್ರ
ಜೀವ ಪ್ರಾಣ ಮಾಡಿತು ಪವಿತ್ರ
ದಿವ್ಯ ದೇಹವಾಯಿತು ಸರ್ವಗಾತ್ರ
ಭವಹಿಂಗಿ ಹೋಯಿತು ವಿಚಿತ್ರ 2
ಭ್ರಮರ ಗುಂಫ ಎಂಬುದು ಗಯಾ
ನೇಮದಿಂದ ಕಂಡವಗ ವಿಜಯ
ಪ್ರೇಮಭಾವೆಂಬುದು ಸರ್ವಕ್ರಿಯ
ವರ್ಮದೋರಿತು ಗುರು ಪುಣ್ಯೋದಯ 3
ಪೃಥ್ವಿ ಪರ್ಯವಣಿದೆವೆ ನೋಡಿ
ತತ್ವದೊಳೇಕತ್ವ ಸಮಗೂಡಿ
ಹಿತತ್ವವೆಂಬ ದಯ ಮಾಡಿ
ಕಥತ್ವವೆಂಬು ದೀಡಾಡಿ 4
ಕಣ್ಣ ದೋರಿ ಬಂತೆನಗ ತಾರ್ಕಣ್ಯ
ಕಣ್ಣು ಕಂಡುಗೆಯಿತು ಧನ್ಯಧನ್ಯ
ಚಿಣ್ಣ ಮಹಿಪತಿಗಿದೆ ಸರ್ವಪುಣ್ಯ
ಇನ್ನೊಂದು ಪಥವ್ಯಾಕೆ ಅನ್ಯ 5