ಅನಂದವಾಯಿತು ಸ್ವಾನಂದ ಘನಸುಖ
ತನುಮನದೊಳಗೆ ತನ್ನಿಂದ ತಾನೊಲಿದು
ಖೂನದೋರಿತು ಘನ ಗುರು ಕೃಪೆ ಎನಗೆ 1
ಸೋಮಾರ್ಕದ ಮಧ್ಯಸ್ವಾಮಿ ಸದ್ಗುರು ಪಾದ
ನಮಿಸಿ ನಿಜದೋರಿತು
ಜುಮುಜುಮುಗಟ್ಟಿ ರೋಮಾಂಚನಗಳುಬ್ಬಿ
ಬ್ರಹ್ಮಾನಂದವಾಯಿತು 2
ನಾಮ ಸೇವಿಸಿ ಮಹಿಪತಿಗೆ ಸವಿದೋರಿತು
ಪ್ರೇಮಭಾವನೆಯೊಳಗೆ ಧಿಮಿಧಿಮಿಗುಡುತ
ಬ್ರಹ್ಮಾನಂದದ ಸುಖ ಅನುಭವಿಸಿತೆನಗೆ 3