ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನಂದವಾಯಿತು ಸ್ವಾನಂದ ಘನಸುಖ ತನುಮನದೊಳಗೆ ತನ್ನಿಂದ ತಾನೊಲಿದು ಖೂನದೋರಿತು ಘನ ಗುರು ಕೃಪೆ ಎನಗೆ 1 ಸೋಮಾರ್ಕದ ಮಧ್ಯಸ್ವಾಮಿ ಸದ್ಗುರು ಪಾದ ನಮಿಸಿ ನಿಜದೋರಿತು ಜುಮುಜುಮುಗಟ್ಟಿ ರೋಮಾಂಚನಗಳುಬ್ಬಿ ಬ್ರಹ್ಮಾನಂದವಾಯಿತು 2 ನಾಮ ಸೇವಿಸಿ ಮಹಿಪತಿಗೆ ಸವಿದೋರಿತು ಪ್ರೇಮಭಾವನೆಯೊಳಗೆ ಧಿಮಿಧಿಮಿಗುಡುತ ಬ್ರಹ್ಮಾನಂದದ ಸುಖ ಅನುಭವಿಸಿತೆನಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದೇ ನೋಡಿ ಸ್ವತಶುದ್ಧ ವiಡಿ ಸದಾ ಸರ್ವದಾ ಇದೇ ಮಾಡಿ ಧ್ರುವ ಅರಹು ಎಂಬುದೆ ಮಡಿ ಉಡಿ ಮರಹು ಮೈಲಗಿ ಮುಟ್ಟಬ್ಯಾಡಿ ಗುರುಸ್ಮರಣೆ ನಿಷ್ಠೆಯೊಳುಗೂಡಿ ಪರಬ್ರಹ್ಮ ಸ್ವರೂಪದ ನೋಡಿ 1 ಕಾಮಕ್ರೋಧದ ಸ್ವರ್ಶವ ಬ್ಯಾಡಿ ನೇಮನಿತ್ಯ ಇದನೇ ಮಾಡಿ ಶಮದಮೆಂಬುದು ಕೈಗೂಡಿ ಪ್ರೇಮಭಾವ ಭಕ್ತಿಯ ಮಾಡಿ 2 ಮಿಥ್ಯಾ ಭೂತಕ ಮಡಿಮಾಡಬ್ಯಾಡಿ ಚಿತ್ತಚಿದ್ಛನ ಸಮರಸ ನೋಡಿ ನಿತ್ಯ ಮಹಿಪತಿಗಿದೆ ಮಡಿ ನೋಡಿ
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತೀರ್ಥಯಾತ್ರೆ ಎಂಬುದು ಇದೆ ನೋಡಿ ಪಾದ ಕೂಡಿ ಧ್ರುವ ಭ್ರೂಮಧ್ಯವೆಂಬುದಿದೆ ಕಾಶಿ ಬ್ರಹ್ಮಸುಖ ತುಳುಕುತಿದೆ ಸೂಸಿ ನೇಮದಿಂದಲಿ ನೋಡಲು ಧ್ಯಾನಿಸಿ ಕರ್ಮಪಾಶ ಹೋಯಿತು ಛೇದಿಸಿ 1 ತ್ರೀವೇಣಿ ಸಂಗಮ ಸುಕ್ಷೇತ್ರ ಜೀವ ಪ್ರಾಣ ಮಾಡಿತು ಪವಿತ್ರ ದಿವ್ಯ ದೇಹವಾಯಿತು ಸರ್ವಗಾತ್ರ ಭವಹಿಂಗಿ ಹೋಯಿತು ವಿಚಿತ್ರ 2 ಭ್ರಮರ ಗುಂಫ ಎಂಬುದು ಗಯಾ ನೇಮದಿಂದ ಕಂಡವಗ ವಿಜಯ ಪ್ರೇಮಭಾವೆಂಬುದು ಸರ್ವಕ್ರಿಯ ವರ್ಮದೋರಿತು ಗುರು ಪುಣ್ಯೋದಯ 3 ಪೃಥ್ವಿ ಪರ್ಯವಣಿದೆವೆ ನೋಡಿ ತತ್ವದೊಳೇಕತ್ವ ಸಮಗೂಡಿ ಹಿತತ್ವವೆಂಬ ದಯ ಮಾಡಿ ಕಥತ್ವವೆಂಬು ದೀಡಾಡಿ 4 ಕಣ್ಣ ದೋರಿ ಬಂತೆನಗ ತಾರ್ಕಣ್ಯ ಕಣ್ಣು ಕಂಡುಗೆಯಿತು ಧನ್ಯಧನ್ಯ ಚಿಣ್ಣ ಮಹಿಪತಿಗಿದೆ ಸರ್ವಪುಣ್ಯ ಇನ್ನೊಂದು ಪಥವ್ಯಾಕೆ ಅನ್ಯ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಿಂತು ಫುಗಡಿ ಹಾಕ ಭ್ರಾಂತತನವ್ಯಾಕ ಸಂತ ಜನನಿಯರು ನೋಡಿ ತಲೆಯ ದೂಗಬೇಕ ಪ ಆಶೆಯಲಿ ತಾನು ಕುಳಿತು ಹಾಕುದೇನು | ಘಾಸಿಯಾಗುವ ಆರುಮಂದಿಯಾ ಕೂಡಿದರೇ ನೀನು 1 ಗರುವ ತನ ಬಿಟ್ಟು ತಿರುಗಣೆಯಾ ನುಟ್ಟು | ಆರಹು ಶರಗಿನಿಂದ ಬಿಗಿದು ಹಾಕ ಮಲಕ ಗಂಟು 2 ಲಜ್ಜೆ ವಳಿದು ನೋಡೇ ಹರಿಯಸ್ತುತಿ ಮಾಡಿ | ಘಜ್ಜಿಗೆ ಬಂಡಮ್ಯಾಲ ಯಚ್ಚರ ಮೈಯ್ಯ ಮರೆಯಿಬ್ಯಾಡೇ 3 ಎರಡು ಸವೆ ನಿನೆಹಾ ಜ್ಞಾನ ಸಖೀ ಕೈಯ್ಯಾ | ಜರಿಯದಂತೆ ಹಿಡಿದು ತಿರುಗು ನಡವಿಧ ಪರಿಯಾ 4 ಫುಗಡಿ ಇದೇ ಆಡೀ ಪ್ರೇಮಭಾವ ಕೂಡೀ | ಮುಗುತಿ ಕೊಡುವ ತಂದೆ ಮಹಿಪತಿ ಸ್ವಾಮಿ ದಯಮಾಡಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು