ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂದತೀರ್ಥರಾನಂದದಿ ಭಜಿಸಿರೊ ಬಂದು ಸಲಹಬೇಕೆಂದು ಬೇಡುತ ಪ ಶ್ರದ್ಧೇ ರಮಣನು ಮಧ್ಯಗೇಹರ ಶುದ್ಧಕುಲದೊಳು ಉದ್ಭವಿಸಿದ 1 ಗೋಪ್ರದಾಯಕ ವಿಪ್ರವರ್ಯಗೆ ಕ್ಷಿಪ್ರದಲ್ಲಿ ಸುಪ್ರಜ್ಞೆಯಿತ್ತ 2 ದೂಷ್ಯವಾದ ದುರ್ಭಾಷ್ಯ ಖಂಡಿಸಿ ಶಿಷ್ಯರಿಗೆ ಸದ್ಭಾಷ್ಯ ಪೇಳಿದ 3 ಯವನ ನೃಪತಿಯ ಭವನಕೆ ಪೋಗಿ ಅವನ ಅರ್ಧರಾಜ್ಯವನೆ ತಂದ 4 ದೇವಗಂಗೆಯು ಪಾವನಾಂಶನ ಸೇವೆಮಾಡಿ ತಾ ಪಾವನಳಾದ 5 ಸಿರಿ ಸ್ವಾಮಿ ನೃಹರಿಯ ಪ್ರೇಮಬಲದಿ ನಿಸ್ಸೀಮರಾದ 6
--------------
ವಿದ್ಯಾರತ್ನಾಕರತೀರ್ಥರು