ಜಯ ಜಯ ಮಂಗಳ ಗುರುಮೂರ್ತಿ |
ಜಯಸುರವರ ಪಾವನಕೀರ್ತಿ ಪ
ಮೊಲದಜ್ಞ ತಮನಸುವನೆ ಬಗೆದೆ |
ವಿದಿತ ವಿವೇಕ ನಗವನೊಗೆದೆ |
ಒದಗಿ ಸುಜ್ಞಾನ ಧರೆಯ ತಂದೆ |
ಬುಧರ ಸದ್ಭಾವ ಸ್ತಂಬದಲೊಗೆದೆ 1
ಪ್ರೇಮಪ್ರೀತಿ ರತಿವೆಂಬುವದಾ |
ಭೂಮಿಯ ಬೇಡಿದ ಮೂರ್ಪಾದಾ |
ದಮೆಶಮೆ ಗುಣಕ್ಷತ್ರಿಯ ವೃಂದಾ |
ಸುಮನರ ಬಿಡಸಿದೆ ಸೆರೆಯಿಂದ 2
ಅಪದಿ ಗೋಕುಲದಲಿ ನಲಿದೆ |
ತಾಪತ್ರಯ ಮುಪ್ಪುರ ವಳಿದೆ |
ವ್ಯಾಪಿಸಿ ಕಲಿಮಲ ಬೆಳಗಿಸಿದೆ |
ಕೃಪೆಯಲಿ ಮಹೀಪತಿ ಸುತಗೊಲಿದೆ 3