ಮಾಹಾನುಭಾವರೇ ಪ
ಸದಮಲಾನಂದ ಪಡಿರೋ ನಮ್ಮವರೇ
ಮೊದಲು ವಂದನೆ ಹರಿಗೆ ಅರ್ಪಿಸಿ ಅ.ಪ
ಪದುಮನಾಭನ ಸದಮಲಂಘ್ರಿಯ
ಅಧಿಕ ನಿಖಿಳದೇವರೊಳಗೆಂದು
ಕದಲಗೊಡದಂತೆ ಮನವ ನಿಲ್ಲಿಸಿ
ವದನದಿಂ ವಿಧವಿಧದಿ ಪೊಗಳುತ 1
ಆದಿ ಅಂತ್ಯಿಲ್ಲದಾದಿವಸ್ತು
ಸಾಧುಸಜ್ಜನಪ್ರೇಮಪೂರ್ಣೇಂದು
ವೇದ ವೇದಾಗಮ್ಯ ಮಹ
ಪಾದ ಮೇಲೆಂದು 2
ನಿಗಮ ಆಗಮಗಳಿಗೆ ನಿಲುಕದ
ಸುಗುಣಸಂತರ ಕರುಣಮಂದಿರ
ಬಗೆದು ಭಕುತರ ಭಾವ ನೀಡಲು
ರಘು ಶ್ರೀರಾಮಗೆ ಸಾಟಿಯಿಲ್ಲೆಂದು 3