ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈ ಸುಖವ ಬಿಟ್ಟನ್ನು ಬೇರೆ ಸುಖವುಂಟೆ ವಾಸುದೇವನ ಭಜಿಸಿ ಸುಖಿಯಾಗು ಮನವೆ ಈ ಸುಖವ ಬಿಟ್ಟಿನ್ನು ಬೇರೆ ಸುಖವುಂಟೆ ಪ ಕಾಮಕ್ರೋಧಾದಿಗಳ ಕಡೆಗೊತ್ತಿ ನಿರತ ನಿ ಷ್ಕಾಮನಾಗಿಯೆ ತುಲಸಿ ಕುಸುಮಗಳ ತಂದು ಪ್ರೇಮಪೂರಿತನಾಗಿ ಸರ್ವಪರಿಪೂರ್ಣ ಶ್ರೀ ರಾಮಪೂಜೆಯಗೈದು ಸುಖಿಯಾಗು ಮನವೆ 1 ಸೂನು ಮನೆ ಮೊದಲಾದ ಮಮಕಾರವನು ಬಿಟ್ಟು ಧ್ಯಾನವನು ಶ್ರೀಹರಿಯ ಮೂರ್ತಿಯೊಳಗಿಟ್ಟು ಸಾನುರಾಗದಿ ಹರಿಯ ನಾಮಸುಧೆಯನು ನೀನು ಪಾನವನುದಿನ ಗೈದು ಸುಖಿಯಾಗು ಮನವೆ 2 ಧರೆಯೊಳತ್ಯಧಿಕವೆಂದೆನಿಪ ಚಿಕ್ಕನಾಗಾಖ್ಯ ಪುರದೊಳಗೆ ಮಹಿಮೆಯಿಂ ಭಕ್ತರನು ಪೊರೆವ ಗುರು ವಾಸುದೇವಾರ್ಯರೂಪ ವೆಂಕಟಪತಿಯ ಚರಣದಾಸ್ಯವ ಪಡೆದು ಸುಖಿಯಾಗು ಮನವೆ3
--------------
ನಾರಾಯಣದಾಸರು