ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

1. ರಾಮಾನುಜರು ಆಚಾರ್ಯ ಪ್ರಾಚಾರ್ಯ ಪರಮಾಚಾರ್ಯಾ ನೀಚತೆ ನೀಗಿಸಿ ನಿನ್ನಂತೆ ಗೈದೇ ಪ ಸರ್ವಗುರುವೇ ನಮಿಪೆ ಧ್ಯಾನಿಪೆ ಶ್ರೀನಿವಾಸಾ ಅ.ಪ ಪಾದೋದಕದಿಂ ಪಾವನಗೈದೇ ಸಾಧು ಸಂಗತಿಗಳ ಸಂತಸದಿ ಪೇಳ್ದೇ1 ಭೇದವ ತೊರೆದೇ ವೇದಗಳೊರೆದೇ ಸಾದರದಿಂ ಸದ್ಬಂಧು ನೀನಾದೇ 2 ಪಾಪವ ಕಳೆದೇ ಗೋಪ್ಯಗಳುಸುರಿದೆ ಶ್ರೀಪತಿಮೂರ್ತಿಯ ಹೃದಯದಿ ತೋರ್ದೆ 3 ಕೃಪೆಯನ್ನು ತೋರ್ದೆ ಅಪಾರ ಮಹಿಮ ಉಪಕರಿಸುತ ಎನ್ನ ಉನ್ನತಿಗೆ ತಂದೆ 4 ಸಂಸಾರಾಂಬುಧಿ ಹಿಂಸೆ ದಾಂಟಿಸಿದೆ ಹಂಸನೆ ಸಿಂಹ ಕಿಶೋರ ನ್ಯಾಯದಿ 5 ವಿಪರೀತಮತಿಯನ್ನ ಪರಿಹರಿಸಿದೆ ನೀಂ ಸುಪಥದಿ ಸುಖದಾನಂದನಿಧಿಯಿತ್ತೇ 6 ಜಾಜೀಶನಿಗೆ ಪ್ರೇಮಪುತ್ರನು ನೀಂ ಪೂಜಿಪೆ ಪದಯುಗ ಶರಣನೆ ಕರುಣಿಸು 7
--------------
ಶಾಮಶರ್ಮರು