ಪಾದ ಪರಮಭಕ್ತಿಲಿ ಎನ್ನ
ಶಿರದ ಮೇಲ್ಪೊತ್ತು ಬಿಡದಿರುವೆನನವರತ ಪ
ತಾಳಿ ವಿಮಲಭಕ್ತಿ ತಾಳದಂಡಿಗೆ ಸ
ಮ್ಮೇಳದೊಡನೆ ತ್ರಿಕಾಲವು ಬಿಡದೆ
ನೀಲವರ್ಣನ ಭಜನೆ ಮೇಲಾಗಿ ಮಾಡುವ
ರಾಲಯದಿ ನಲಿದಾಲಿಸಾನದಿಂದಪ 1
ನಿಲಯದಂಗಳದೊಳು ತುಲಸಿವನವ ರಚಿಸ
ನಿತ್ಯ ಜಲಜನಾಭಂಗೆ
ಮಲತ್ರಯಂಗಳ ನೀಗಿ ಮಲಿನಗುಣವ ಕಳೆದು
ಸಲಿಸಿ ಶ್ರೀಪಾದಮಂ ಒಲಿಸಿ ಸುಖಿಸುತಿರ್ಪ 2
ತಿಳಕೊಂಡು ಸಂಸಾರ ಕಳವಿನಿಂದುಳಕೊಂಡು
ಹೊಳೆವ ಜ್ಞಾನಜ್ಯೋತಿ ಬೆಳಗಿನೋಳ್ನಲಿಯುತ
ನಿಲಿಸಿ ಹರಿಪಾದದಿ ಚಲಿಸದೆ ಮನ ಹಂ
ಬಲಿಸಿ ತಪವ ಶೇಷಾಚಲಯಾತ್ರೆ ಮಾಳ್ಪಂಥ 3
ಮರೆವು ಮಾಯವ ನೀಗಿ ಅರಿವಿನಾಲಯದೊಳು
ಸಿರಿಯರರಸನ ನಿಜ ಚರಿತಂಗಳರಸುತ
ಪರಮಸಾಲಿಗ್ರಾಮದ್ವರಮಹಿಮೆಯನರಿತು
ನಿರುತದಿಂ ಪೂಜಿಸಿ ಪರಮಪಾವನರೆನಿಪ 4
ಕಾಮಿತಂಗಳ ನೀಗಿ ಕೋಮಲ್ಹøದಯರಾಗಿ
ಪ್ರೇಮಪಿಡಿದು ಸರ್ವಭೂಮಿ ಜೀವಂಗಳೊಳ್
ನೇಮನಿತ್ಯದಿ ನಿಸ್ಸೀಮರಾಗಿ ಸತತ
ಸ್ವಾಮಿ ಶ್ರೀರಾಮನಾಮಾಮೃತ ಸುರಿಯುವ 5