ರಾಮಕೋಟಿ ನಾಮಭಜನಾ ನೇಮದಿಂದ ಮಾಳ್ಪನು ಧನ್ಯ ಪ
ಪ್ರೇಮಪಾಶದಿಂದಬಿಗಿದುಸ್ವಾಮಿಯನ್ನ ಹೃದಯದಿನೆನೆದು ಅ.ಪ
ಶಂಭು ತನ್ನ ಮನದಿನಿತ್ಯ ಇಂಬಿನಿಂದ ಧ್ಯಾನಿಸುತ್ತ
ಅಂಬಿಕೆಗನುಮೋದಿಸುತ್ತ ಸಂಭ್ರಮದಿಂದೊರೆದ ಸತ್ಯ1
ನೇಮದಿ ಕಾರ್ಯವನು ಬಗೆದು
ಭೂಮಿಜಾತೆಯ ಕಂಡವಗೊಲಿದ 2
ಕರುಣಾಮೂರುತಿಯೊಲುಮೆವಡೆದು
ಪರಮಪುಣ್ಯ ವಿಭೀಷಣ ಒರದ 3
ಭರತಭೂಮಿಯೊಳಗೆ ಜನಿಸಿ ಹರಿಯ ಭಕ್ತ ಗಣ್ಯರೆನಿಸಿ
ಪುರಂದರ ಕನಕದಾಸರು ಕರುಣದೊರೆದ ಭವತಾರಕವಾ 4
ಸಾಸಿರನಾಮವ ಪಠಿಸಿ ವಾಸುದೇವನಿಗೆ ವಂದಿಸಿ
ಭೂಸುರರಾನಂದಿಸುವ ಕೇಶವ ಜಾಜೀಶನ ತೋರ್ಪ 5