ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಿರಿಯು ಬೇಡೆನಗೆ ಈ ಬರಿಯ ವೈಭವದ ಪರಿಯು ಬೇಡವೆನಗೆ ಪ ಪರಿಪರಿಯಲಿ ನಿನ್ನ ಚರಣ ಸೇವೆಯಲಿ ಪರತರ ಸುಖಗಳ ಅರಿವು ಬೇಕಲ್ಲದೆ ಅ.ಪ ಮರೆತೆನೊ ನಿನಗಾಗಿ ಚೆಲುವ ಸತಿಸುತರ ತೊರೆದೆನೋ ಬಹು ವಿಧ ಪ್ರೇಮಪಾಶಗಳ ಬೆರಗಾದೆನೋ ದೇವ ಮರುಕದಿಂದೆನಗೆ ನೀ ವರ ಮಾರ್ಗವ ತೋರೋ ಮುರಳೀಧರನೆ 1 ಮಂದಮತಿಗಳೆನ್ನ ನಿಂದಿಸುತಿರುವುದಾ ನಂದವೇನೋ ನಿನಗೆ ಸುಂದರ ಮೂರುತಿ ಕುಂದಿ ಕುಂದಿದ ಮನ ಮಂದಿರದಲಿ ನಿಲ್ಲೋ ಇಂದಿರಾ ರಮಣನೆ 2 ಎನ್ನ ಕುಂದುಗಳನ್ನು ಮನ್ನಣೆ ಮಾಡಿ ಸಂ ಪನ್ನತೆ ಎನಗೀಯೋ ಘನ್ನ ಮಹಿಮ ಸುಪ್ರಸನ್ನವಿಠ್ಠಲನೇ ನಿನ್ನವನೆನಿಸೆಲೋ ಪನ್ನಗಶಯನನೇ 3
--------------
ವಿದ್ಯಾಪ್ರಸನ್ನತೀರ್ಥರು