ಗೂಳ್ಯಾಗಿ ಮೆರೆಯಣ್ಣ ಶ್ರೀಹರಿ
ಗೂಳ್ಯಾಗಿ ಮೆರೆಯಣ್ಣ ಪ
ಗೂಳ್ಯಾಗಿ ಮೆರೆಯೆಲೊ ಮೂಳಮಾನವರ
ಆಳಾಗಿ ಕೆಡದ್ಯಮದಾಳಿಯ ಗೆಲಿದು ಅ.ಪ
ಅದ್ರಿಧರನಡಿಯ ಪ್ರೇಮವೆಂಬ
ಮುದ್ರೆಯನ್ನು ಪಡೆಯೋ
ಕ್ಷುದ್ರದಾನವ ಹರರುದ್ರಾದಿನುತ ಸ
ಮುದ್ರಶಾಯಿಧ್ಯಾನ ಭದ್ರಮಾಡಿಟ್ಟುಕೊಂಡು 1
ಕುಜನರ ಸಂಗ ತಳ್ಳೋ ಸುಸಂಗ
ಭುಜವ ಬೆಳೆಸಿಕೊಳ್ಳೋ
ಭುಜಗಶಯನನ ನಿಜಚರಣದ ಮಹ
ಭಜನೆವೆಂದೆಂಬುವ ಝಾಲ ಧರಿಸಿಕೊಂಡು 2
ತಾಮಸವನ್ನು ನೀಗಿ ಸುಜನರ
ಪ್ರೇಮಪಾತ್ರನಾಗಿ
ಶಾಮಸುಂದರ ಶ್ರೀರಾಮನಾಮ ತ್ರಿ
ಭೂಮಿಗಧಿಕೆಂದು ನಿಸ್ಸೀಮ ಡುರುಕಿ ಹೊಡಿ 3