ಏನು ಬರೆದೆಯೊ ಬ್ರಹ್ಮನೆ
ನನ್ನಣೆಯಲರಿಯದು ಸುಮ್ಮನೇ ಪ
ನೋನವನು ಹೋಗಾಡಿ ಜನರೊಳು
ಹೀನವಾಗುವ ಹಾಂಗೆ ಹಣೆಯೊಳು ಅ.ಪ
ಹಿಂದೆ ಮಾಡಿದ ಕರ್ಮವು ಯಿದ
ಕ್ಕೊಂದು ಪಾಯದ ಮರ್ಮವೂ
ತಂದೆ ನೀನೆನಗಿಂದು ತೋರಲು
ನಿಂದು ಭಜಿಸುವೆ ಮಂದರೋದ್ಧರ 1
ಪಾಪಗಳ ಹರನ್ಯಾರೆಲೊ
ಭೂಪದಶ ಅವತರಾನೇ
ಕೋಪಮಾಡದೆ ದಾಸಮಾಡಿದ |
ಪಾಪಗಳ ಪರಹರಿಸೊ ಬೇಗದಿ 2
ಲೋಕನಾಯಕ ಭವಹಾರೀ
ಕಾಕು ಬುದ್ಧಿಗಳನ್ನು ಬಿಡಿಸಲು
ಏಕ ಮನದೊಳು ನೆನೆವೆ ನಿಮ್ಮನೂ 3
ಗುರುವು ತುಲಸೀರಾಮನೇ ಪರನು
ಗುರುವೆ ತ್ರಾಹಿತ ಪ್ರೇಮನೆ
ಧರೆಯೊಳಧಿಕ ಚೆನ್ನಪುರಿಯಾ
ದೊರೆಯ ಲಕ್ಷ್ಮೀನಾರಾಯಣಾ 4