ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀಮದನಂತನೀತಾ ಶ್ರೀಮದನಂತನೀತಾ | ಸೀಮರಹಿತಾ ಮಹಿಮನೀತಾ | ನಾಮ ನೆನೆಯೆ ಒಲಿದು ನಿಷ್ಕಾಮ ಫಲವ ನೀವಾನೀತ ಶ್ರೀಮದಾನಂತನೀತನು ಪ ಆದಿದೈವನೀತಾ ಜೀವಾದಿಗಳಿಗಭಯದಾನೀತಾ | ಶ್ರೀಧರಣಿ ದುರ್ಗಾರಮಣನಾದಾತನೊದಾನೀತಾ | ವೇದಪಾಲಕನೀತಾ ಸನಕಾದಿಗಳಿಗೆ ಪ್ರೀತಾನೀತಾ | ನಿತ್ಯ ಸಾಧುಗಳ ಕಾಯಿದನೀತಾ1 ಗಜವರದನೀತಾ ಗಂಗಜನ ಮನೋಭೀಷ್ಟನೀತಾ | ಗಜ ರಜಕ ಬಿಲ್ಲು ಮಲ್ಲರ ವ್ರಜನನಾಳಿದ ದಿಟ್ಟಿನೀತಾ | ತ್ರಿಜಗ ವಂದಿತಾನೀತಾ ಅಂಗಜನ ಪೆತ್ತ ಪ್ರೇಮನೀತಾ | ಪಂಕಜ ಬಾಂಧವನ ಭಾಸನೀತಾ2 ಕಪಟನಾಟಕನೀತಾ ಕರಡಿ ಕಪಿಗಳನಾಳಿದನೀತಾ | ಕಪಿಲಮುನಿಯಾಗಿ ತಾಯಿಗೆ ಉಪದೇಶವ ಪೇಳಿದನೀತಾ | ದ್ರುಪದಸುತೆಯ ಕಾಯದನೀತಾ ಸ್ವಪ್ನ ಸುಷುಪ್ತಿ ಜಾಗ್ರದಾವಸ್ಥೆಗೆ ಗುಪುತವ್ಯಾಪಕ ಗುಣನೀತಾ3 ಪರಮ ಪುರುಷನೀತಾ ದಶಶಿರನ ಕುಲವನಳಿದನೀತಾ | ಗಿರಿಯಲಿ ಧರಿಸಿ ಲೋಕವ ಪೊರೆವ ವಿಶ್ವಾಧಾರನೀತಾ | ಹರನ ವೈರಿಯ ಕೊಂದನೀತಾ | ನಿರುಪಮ ಮೂರುತಿನೀತಾ | ಸುರರಿಗೆ ಉಣಿಸಿದನೀತಾ | ತರಳ ಲೀಲೆಯ ತೋರಿದನೀತಾ4 ನಿತ್ಯ ಜಪತಪಾದಿಗೆ ನೇಮಪ್ರಕಾರ ಚೇಷ್ಟಕನೀತಾ | ಸಾಮ ಲೋಲ ವಿಜಯವಿಠ್ಠಲ ತಾಮರಸನಾಭನೀತಾ 5
--------------
ವಿಜಯದಾಸ