ತ್ರಯೋದಶಿಯ ದಿವಸ
ಲೀಲೆ ಪೇಳುವದೇನೆ ಬಾಲೆ
ಪರಮಾತ್ಮನ ಲೀಲೆ
ಮೂಡ ಗಿರೀಶನು ಪಾಡಿಲ್ಲದ ಪ್ರಭೆ
ಗೂಡಿದ ಮಂಟಪಕ್ಕೇರಿದ ವಿಸ್ತರ 1
ಕುಂದಣ ಪೂರಿತವಾ-
ಹೇಮದ ಬಂದಿತವ-
ಪ್ರಜ್ವಲದಿಂದಿರುವ
ಶ್ರೇಷ್ಠವಾಗಿಹ ನಾಗರಹೆಡೆವದನದಿ
ಇಷ್ಟದಿ ನೇತಾಡುವ ಸರಮಾಲೆಯ 2
ಶುಕಪಿಕ ಮುಂತಾಗಿಹ
ಧ್ರುವಮಂಡಲ ಪರಿಯಲಿ
ನೋಡುವರತಿ ಚಂದ
ಸುತ್ತಲು ಶೋಭಿಪ ಮುತ್ತಿನ ಬಿಂತಿಯ
ಪೊತ್ತು ವಿನೂತನವೆತ್ತಿದ ವಿಸ್ತರ 3
ಮಿನುಗುವದೋರಂತೆ
ಕಾಣುವದೆಲೆ ಕಾಂತೆ
ಕಾಣೆನು ಇದರಂತೆ
ಚಾತುಷ್ಕಂಬದೊಳೂತು ನಡುವೆಯಿಹ
ಕೌತುಕವಾಗಿಹನಾಥರದಾತನ 4
ಬರುವನು ಗೋವಿಂದ
ಪೊರೆಯುವದಿದು ಚಂದ
ಭಕ್ತರ ಕೈಯಿಂದ
ಪೊಂಬಣ್ಣದ ದಿವ್ಯಾರತಿ ಕೊಳ್ಳುತ
ಇಂಬಾಗಿಹ ಕರುಣಾಂಬುಧಿ ಭರಿತ 5
ವೇದವ ಲಾಲಿಪನು
ಪ್ರೇಮನಾಗುತ ಸಂಗೀತಗಳನು
ಕೇಳುತ ಸುತ್ತುವನು
ತಾ ಮಮಕಾರದಿ ಬರುವನು ಮೇಣು
ಕೋಮಲಕಾಯವ ಸಂತತ ಮಂಡಿಸಿ
ಸಾಮಗಾನ ಲೋಲೋಪ್ತಿಯೊಳಿರುವನು 6
ಭಕ್ತರ ಸಮುದಾಯಕೆ
ತದನಂತರ ಗೈದೇ-
ಕಾಂತ ಸೇವೆಯ ತಾ ಕೈಕೊಂಡ
ಸಂತಸದಲಿ ಶ್ರೀಕಾಂತನು ಭಕುತರ
ಚಿಂತಿತವೆಲ್ಲ ನಿರಂತರ ಕೊಡುವನು 7