--------ಹರಿ ನಾರದವರದ ಪ
ಅಗಣಿತ ಮಹಿಮನ ಆನಂದ ನಿಲಯನ
ಬಗೆ ಬಗೆಯಲಿ ಭಕ್ತರನ ಬಿಡದೆ ಪೊರೆವನಾ 1
ಸುಜನ ವಿಲಾಸನ ಕಂದನ ಕಾಯ್ದನ
-----ವರದನಾ ಸುಂದರ ರೂಪನಾ 2
ಜಲದೊಳಾಡುವನ ನೆಲದ ಮೇಲಾಡುವನ
ಬಲವುಳ್ಳ ಅರಸನ ಬತ್ತಲೆ ಹಯವನೇರಿದನ 3
ಶೃಂಗಾರ ಭೂಷಣನ ಸುರಮುನಿವಂದ್ಯನ
ಗಂಗೆಯ ಪಡೆದನ ಕರುಣಾಸಾಗರನ 4
ಕರ್ಣ ಮೌಕ್ತಿಕ ಹಾರನಾ
ಸಕಲ ಆಭರಣನ ಸರಸಿಜನಯ್ಯನ 5
ನಿತ್ಯ ಕಲ್ಯಾಣನ
ಜಗದೋದ್ಧಾರನ ಜಾನಕಿ ಪ್ರೇಮನಾ 6
ಅಚ್ಯುತಾನಂತನ ಹರಿ 'ಹೊನ್ನ ವಿಠ್ಠಲನ’
ಸಚ್ಚಿದಾನಂದ ಸರ್ವೋತ್ತಮ ದೇವನ 7