ರಾಮ ರಾಮ ರಾಮ ಶ್ರೀರಾಮನೆನ್ನಿರೊ
ಪ್ರೇಮದಿಂದ ಶ್ರೀ ಜಾನಕಿ ಪ್ರೇಮನನೆನೆಯಿರೊ ಪ
ಅಂದದಿಂದ ಈ ದಶರಥನಂದನೆಂದು ----
ಚಂದದಿಂದ ಚಲನೆಯಿಲ್ಲದೆ ಚಿತ್ತಸ್ವಸ್ಥದಿ
ಕಾಲ ಕಳೆಯ
ಹೊಂದಿ ದೇವರ ಚರಣ ಕಮಲಾ
ನಂದ ಅರ್ಚಿಸುವ ಮಂದಿರದಿ ಭಜಿಸಿರೊ 1
ಕಾಮನಯ್ಯನ ಕಡಲೊಳಾಳ್ದÀ್ದನ
ಕೂರ್ಮರೂಪ ವರಾಹನಾದನ ಸ್ವಾಮಿ ನರಹರಿ
ವಾಮನ ಪರಶುರಾಮನಾದನಾ
ರಾಮಕೃಷ್ನ ಬೌದ್ಧಕಲ್ಕಿ ನಾಮವುಳ್ಳ ನಾರಾಯಣನ
ನೇಮದಿಂದ ನಿತ್ಯದಲ್ಲಿ ನಾಮ ಸ್ಮರಿಸಿರೊ 2
ಪಿತೃವಾಕ್ಯ ಪಾಲಿಸಿದವನು
ಸತತ ಭಕ್ತರ ಸಲಹುತಿಹನು
ಕ್ಷಿತಿಗೆ ಒಡೆಯನಾದ ದೇವನು 'ಶ್ರೀ ಹೊನ್ನ ವಿಠ್ಠಲಾ’
ನತಿಶಯದಿಂದಲಿ ಹೃದಯನಂಬಿ ಇರುವ ನರರಿಗೆ--------ಸದ್ಗತಿಯ ತೋರುವನಧಿಕ ಸಂಪನ್ನ 3