ಕೃಪೆಯಿಟ್ಟು ಸಲಹೆನ್ನ ಹರಿಯೆ ನರಹರಿಯೆ
ದ್ವಿಪÀವರವರದನೇ ಬಾರಯ್ಯ ದೊರೆಯೆ ಪ
ದುರಿತಹರÀ ವರ ಚರಣಕಮಲನೆ
ಧರಣಿಧರವನು ಕರಸರೋಜದಿ
ಧರಿಸಿ ಸುಜನರ ಪೊರೆದ ಮುರಳೀ-
ಧರನೇ ಮೋದವಪಡಿಸಿದಂತೆ ಅ.ಪ
ನಂದನಂದನ ನಿನ್ನ ಚರಣ ಒಂದೇ ಶರಣ
ಎನಗೆಂದು ನಂಬಿರುವುದೇ ಒಳ್ಳೇ ಆಭರಣ
ಇಂದಿರೇಶನೆ ಮಾಡೋ ಕರುಣ ಸಿಂಧುಶಯನ
ಸುಂದರೀಮಣಿ ಸಹಿತದಲಿ ನೀ
ಬಂದು ಎನ್ನಯ ಮಂದಿರದಲಿ
ನಿಂದು ಎನ್ನವನೆಂದು ಭಾವಿಸಿ
ನಂದಪಡಿಸೈ ನಂದಬಾಲನೆ 1
ದೀನಪಾಲನೆ ಭೂಮಿಭಾರ ಹಾನಿಕಾರ ಪಂಚ
ಸೂನಶರನಪಿತ ವಿಗತವಿಕಾರ
ಶ್ರೀನಾಥ ಸುಜನಮಂದಾರ ಮೀನಾಕಾರ
ನಾನು ನಿನ್ನವನಯ್ಯ ಎನ್ನಯ
ಮಾನ ಮತ್ತಪಮಾನ ನಿನ್ನದು
ಹೀನಮತಿ ಇವನೆಂದು ತಿಳಿದುದಾ-
ಸೀನಮಾಡದೆ ಸಾನುರಾಗದಿ 2
ಸೋಮ ಕುಲಾಂಬುಧಿಸೋಮರಾರಾಮ
ಬಲರಾಮ ಸಹಜನೇ ಸುರರಿಪು ಭೀಮ
ವಾಮಲೋಚನೇರಿಗೆ ಕಾಮ ಪ್ರೇಮಧಾಮ
ಕಾಮಜನಕನೆ ಸಾಮಗಪ್ರಿಯ
ನಾಮಗಿರಿ ಶ್ರೀ ರಾಮ ನರಹರೆ
ಕಾಮಿತಾರ್ಥವನೀವ ಸುರತರುಕಾಮಧೇನು ಚಿಂತಾಮಣಿಯೆ ನೀ 3