ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಾಗಿಬಾರಯ್ಯ ನಾಗಶಯನ ಪ ಭೋಗದಾಸೆ ನೀಗಿಸೆನ್ನು ಬೇಗ ರಕ್ಷಿಸು ಬಾಗಿ ಬೇಡ್ವೆ ಅ.ಪ ದುಷ್ಟಭವದರಿಷ್ಟದಲಿ ಇ ನ್ನೆಷ್ಟುದಿನ ನಾ ಕಷ್ಟಬಡಲಿ ದೃಷ್ಟಭ್ರಷ್ಟತೆ ನಷ್ಟಗೊಳಿಸಿ ಶಿಷ್ಟಸಂಗದೊಳಿಟ್ಟು ಸಲಹೊ 1 ಜನನ ಮರಣವ ನೆನೆಸಿಕೊಳ್ಳದೆ ಬಿನಗುತನದಲಿ ದಿನವಗಳೆದೆ ಅಣುಗನ ಘನತಪ್ಪು ಗಣಿಸದೆ ಘನ ಘನ ನಿಮ್ಮ ನೆನಹ ಪಾಲಿಸು 2 ಸ್ವಾಮಿಯೆನ್ನಯ ನೇಮವಿಲ್ಲದ ಕಾಮಿತಂಗಳ ದೂರಮಾಡಿ ಪ್ರೇಮದೆನ್ನಗೆ ಕ್ಷೇಮಕೊಡು ಶ್ರೀ ರಾಮ ಮೂಜಗ ಸಾರ್ವಭೌಮ3
--------------
ರಾಮದಾಸರು