ಸರಸ್ವತಿಮಾತೆ ಪರತರಚರಿತೆ
ವರ ಪುಣ್ಯನಾಮಳೆ ಪ
ಕರುಣಿಸಿವರವ ಕರುಣಾಕರಳೆ
ಕರುಣದಿ ಕಾಯೆ ಅ.ಪ
ಪದುಮಾಸನನ ಸುವದನ ನಿವಾಸೇ
ತ್ರಿಭುವನಾರ್ಚಿತೆ
ಸತತವಾಗಿ ಸುದಯೆ ಹೃದಯೆ ಸ್ಥಿರ
ಸದುಮತಿ ಪಾಲಿಸೆ ಪರಮದಯದಿ ಪದುಳಂಗೆ ದಯದಿ 1
ವೀಣಾಧರಿ ಸುವಾಣಿ ಕಲ್ಯಾಣಿ ಮಾನಿನಿ
ಬ್ರಹ್ಮನ ಜನನಿಯೆ
ಜಗದಜಾಣೆ ಸುತ್ರಾಣೆ ನಿಜ
ಜ್ಞಾನಾಧಿಕಾರಿ ಜ್ಞಾನವ ನೀಡೆ ಮಾಣದೆ ಎನಗೆ 2
ಪಾಮರತನ ನಿವಾರಣೆಗೊಳಿಸೆ
ಪ್ರೇಮದೆನಗೆ ಸುಜಾಣೆ
ನುಡಿಗಲಿಸಿ ವಿಮಲೆ ಅಮಲಸುಖ
ಗಮಕದಿ ನೀಡ್ವೆ ಭುವಿಜಪತಿ ಶ್ರೀರಾಮನ ಸೊಸೆಯೆ 3