ಪಾರ್ವತಿ
ಬೀರೆ ಸನ್ಮತಿಯ
ಪಾರ್ವತಿ ಬೀರೆ ಸನ್ಮತಿಯ ಪ
ಪೋರನಲ್ಲಪಾರ ದೊಷ
ದೂರಗೈಯುತ ಮಾರನೈಯ್ಯನ
ಚಾರು ಮೂರುತಿ ತೋರಿ ನಿರುತ
ಸಾರಸಾಕ್ಷಿ ಗಾರು ಮಾಡದೆ 1
ಕ್ಷೋಣಿಯಲ್ಲಿ ಪ್ರಾಣಮತವ
ಜ್ಞಾನದಿಂದಲಿ ಗಾನಮಾಡುವ
ದಾನವಿತ್ತು ಸಾನುರಾಗದಿ
ದಾನವಾಂತಕ ಕಾಣುವಂತೆ 2
ಕಾಮಹರನ ವಾಮಭಾಗದಿ
ಪ್ರೇಮದೀರುವ ಭಾಮಾಮಣಿಯೆ
ಕಾಮಮಾರ್ಗಣ ಧಾಮಕೆಡೆಹಿ
ಶ್ರೀ ನರಹರಿ ನಾಮಸುಖವ 3