ಎಂತು ದೊರೆವುದೋ ಸಂತಸವೆಂತು ದೊರೆವುದೋ
ಕಂತುಪಿತನ ಕರುಣವಿಲ್ಲದೆ ಪ
ರಣಜಯವು ಹಣಪ್ರಾಪ್ತಿ ವನಿತೆಲಾಭವಿನಿತು ಎಲ್ಲ
ವನಜನಾಭನೊಲಿಮೆಯಾಗೋತನಕ ಮಂದಮನುಜನಿಗೆ 1
ಕ್ಷೋಣಿಗೆಲುವ ತ್ರಾಣ ಬಲವು ಮಾಣದಿಹ್ಯ ನಾನಾ ಸೌಖ್ಯ
ಜಾನಕೀಶ ಮೆಚ್ಚುವನಕ ಹೀನಭಾಗ್ಯ ಮಾನವನಿಗೆ 2
ಭೂಮಿಜನಕೆ ಬಾಗದಂಥ ಆ ಮಹ ಸುಕ್ಷೇಮ ಲಾಭ
ಸ್ವಾಮಿ ಶ್ರೀರಾಮ ಪ್ರೇಮಸದನ ಪ್ರೇಮದೀಯದೆ ಪಾಮರರಿಗೆ 3