ಹನುಮರಾಯ ಎನ್ನ
ದುರಿತದಾರಿದ್ರ್ಯವ ಪರಿಹರಿಸಿ ಸಲಹೋ ಹನುಮರಾಯ ಪ
ದಿನದಿನ ಘನಘನ ತನುವಿನರೋಗವು ಹನುಮರಾಯ ಇನ್ನು
ಘನವಾಯ್ತು ಕನಿಕರದಿಂದ ಕಡೆಹಾಯ್ಸಯ್ಯ ಹನುಮರಾಯ
ಕ್ಷಣಸುಖವಿಲ್ಲದೆ ಅನುಪಮ ನೋಯುವೆ ಹನುಮರಾಯ
ಹನುಮರಾಯ1
ಕಿರಿಕಿರಿಸಂಸಾರ ಪರಿಪರಿಬಾಧೆಯು ಹನುಮರಾಯ ಬೇಗ
ಪರಿ ಬಾಧ್ಯಾಕೊ ಹನುಮರಾಯ ಇನ್ನು
ಮರವೆಹರಿಸಿ ನಿಜಅರಿವು ಕರುಣಿಸಿ ಕಾಯೊ ಹನುಮರಾಯ 2
ಸ್ವಾಮಿ ಶ್ರೀರಾಮನ ಪ್ರೇಮದದೂತನೆ ಹನುವiರಾಯ ದೇವ
ಪಾದ ಭಜಿಸುವೆನಯ್ಯ ಹನುಮರಾಯ
ಈ ಮಹಕಷ್ಟದಿ ಕ್ಷೇಮ ಪಾಲಿಸಯ್ಯ ಹನುಮರಾಯ ನಿನ್ನ
ಪ್ರೇಮದಿರಿಸಿ ಎನ್ನ ಮುಕ್ತಿಗ್ಯೋಗ್ಯನ ಮಾಡೊ ಹನುಮರಾಯ 3