ಧ್ಯಾನಿಸಿ ಆತ್ಮನ ಧ್ಯಾನಿಸಿ ಬ್ರಹ್ಮನ
ಧ್ಯಾನಿಸಿ ಸಂತತ ಗುರುವರ್ಯನ ಪ
ದುರಿತ ಮೋಹ ದುಃಖ ದೂರ ನೂಂಕಿ ಕಾಯ್ವ
ಪರಮ ಪಾವನಮೂರ್ತಿಯ 1
ಕಾಮಿತಾರ್ಥಗಳನು ಪ್ರೇಮದಿಕೊಡುವನ
ಭೀಮಮಿತ್ರನ ನೀವು 2
ಪಾಪಪುಣ್ಯವೆಲ್ಲ ಶ್ರೀಪತಿಗರ್ಪಿಸಿ
ಗೋಪತಿಯನು ನಂಬಿ ಧ್ಯಾನಿಸಿ 3
ಧರೆಯೊಳು ಮಹದೇವಪುರದ ಶ್ರೀರಂಗನ
ಮರೆಯದೆ ಭಾವ[ಶುದ್ಧ]ದೊಳ್ 4