ದಾಮ ಶೋಭಿತ ವಿಠಲ | ಸಾಮ ಸನ್ನುತನೇ ಪ
ಪ್ರೇಮದಿಂದಿವಳ ಮನ | ಕಾಮ ಪೊರೈಸೋ ಅ.ಪ.
ಯೇಸೊ ಜನ್ಮದ ಪುಣ್ಯ | ರಾಶಿ ಫಲ ಒದಗುತಲಿದಾಸತ್ವ ದೀಕ್ಷೆಯನು | ಆಶಿಸುತ್ತಿಹಳೋ |ದಾಸವರ್ಯರು ವಿಜಯ | ದಾಸರುತ್ಸವದಿ ಸಂ-ತೋಷದಲಿ ಬಿನ್ನಹವ | ಲೇಸು ಗೈದಿಹಳೋ 1
ಸಾರ ಚಾರು ಮೂರುತಿಯೇ 2
ಆನಂದ ಮುನಿ ಮತದಿ | ಸ್ವಾನುಭವ ದೀಕೆಯನುಜ್ಞಾನ ಭಕ್ತ್ಯಾದಿ ಸಂ | ಧಾನ ತಿಳಿಸುತಲೀ |ಮಾನನಿಧಿ ಕೈ ಪಿಡಿದು | ದೀನಳನು ಪೊರೆಯೆಂದುಪ್ರಾಣ ಪ್ರಾಣನೆ ಬೇಡ್ವೆ | ದೀನ ವತ್ಸಲನೇ 3
ಸಾಧನದಿ ಸತ್ವತೆಯ | ಹಾದಿಯಲ್ಲಿಹಳೀಕೆಸಾಧುಗಳ ಕಂಡು ಹೃದ | ಯಾದ್ರ್ರ ಭಾವದಲೀ |ಮೋದ ಬಡಿಸುತ ಸೇವೆ | ಶ್ರೀಧರನಿಗರ್ಪಿಪಳುಹೇ ದಯಾಂಬುಧೆ ಸಲಹೊ | ಸಾಧು ಜನ ವಂದ್ಯಾ 4
ಸರ್ವಕಾಲವು ದೇಶ | ಸರ್ವಗುಣದ್ರವ್ಯದಲಿದುರ್ವಿಭಾವ್ಯನ ವ್ಯಾಪ್ತಿ | ಸ್ಛುರಣೆಯನು ಕೊಡುತಾ |ಸರ್ವಾಂತರಾತ್ಮಗುರು | ಗೋವಿಂದ ವಿಠ್ಠಲನೆದರ್ವಿ ಜೀವಿಯ ಹೃದಯ | ಗಹ್ವರದಿ ತೋರೋ 5