ಒಟ್ಟು 2 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜೋ ಜೋ ಜೋ ಜೋ ಜೋ ಕೃಷ್ಣ ಪರಮಾ- ನಂದ ಗೋಪಿಯ ಕಂದ ಮುಕ್ಕುಂದ ಜೋಜೋ ಪ ಪೆಟ್ಟಿಗೆಯೊಳಗಿದ್ದ ಪರಿಪೂರ್ಣ ಕಾಮಾ ಮುಟ್ಟಿ ಭಜಿಸೊ ಮಹಾಯತಿಗಳ ಪ್ರೇಮಾ ತೊಟ್ಟಿಲವೊಳಗೆ ಮಲಗಿದ್ದ ಶ್ರೀರಾಮಾ ಘಟ್ಯಾಗಿ ತೂಗಿರಿ ಯತಿಗಳ ಸ್ತೋಮಾ 1 ಪಠವಳಿನುಟ್ಟು ಬಂದರು ಸುರರಾಗ ಘಟಣಿ ಬಿದ್ದೀತೆಂದು ಮಹಪುಣ್ಯವೀಗ ವಟಪತ್ರ ಕಲ್ಪನ್ನ ತೂಗಿರಿ ಬೇಗ ಶ್ರೀರಾಮಾ ಘಟ್ಯಾಗಿ ತೂಗಿರಿ ಯತಿಗಳ ಪ್ರೇಮಾ2 ಪಾಕಶಾಸನ ಬಂದು ಮಳೆಗಳ ಕರೆಯೆ ಗೋಕುಲವನು ಕಾಯ್ದ ಮಹಿಮೆಯು ಸರಿಯೆ ಲೋಕದೊಳಜಭವರಿಗೆ ದೊಡ್ಡ ಧೊರೆಯೆ ಶ್ರೀಕಾಂತ ಸರ್ವೋತ್ಮ ನೀನೆ ಶ್ರೀಹರಿಯೆ 3 ಆಲದೆಲಿಮ್ಯಾಲೆ ಮಲಗಿರೊ ಕಂದಾ ಮ್ಯಾಲ ಕಲ್ಪವನು ದೃಷ್ಟಿಸಿದ್ಯೋ ನಿನ್ನಿಂದಾ ಬಾಲನ ಪಡದ್ಯೊ ನಾಭಿಕಮಲದಿಂದಾ ಪಾಲಾಬ್ಧಿ ಶ್ರೀರಮಣ ಮುಕ್ಕುಂದಾ 4 ಮಾಮುನಿ ಸತ್ಯಬೋಧರಾಯರಿಂದ ಪ್ರೇಮದಿಂದಲ್ಲೆ ತೂಗಿಸಿಕೊಂಬೊ ಛೆಂದಾ ಸ್ವಾಮಿ ಕದರುಂಡಲಗಿ ಹನುಮಯ್ಯಗಾನಂದ ಪ್ರೇಮದಿಂದಲ್ಲೆ ತೂಗಿದರು ಗೋವಿಂದ 5
--------------
ಕದರುಂಡಲಗಿ ಹನುಮಯ್ಯ