ರಾಯ ಹರಿಯ ಪ್ರಿಯ ಕೃಷ್ಣರಾಯದಾರಿ ನೋಡುವನು ತೊರೆಯದಿ ಅಪ್ಪಣೆಯ ಬೇಡಿ ಎರಗಿ ನಿಂತಳು ಪ.
ಹರಿಯ ಬದಿಯಲಿ ಹೋಗಿ ನೀನು ಪರಮ ಪ್ರೇಮದಿಂದಲೈವರು ಬರುವರು ಈ ಕ್ಷಣದಲಿ ಎಂದು ಎರಗಿ ಹೇಳಮ್ಮ1
ಚಿತ್ತಜನೈಯನ ನೋಡಿ ಚಿತ್ತಹರುಷ ಬಡಿಸೆವಮ್ಮವೃತ್ತಾಂತವ ಹೋಗಿ ಹೇಳೆ ಕೀರ್ತಿವಂತಗೆ2
ಮಿತ್ರೆ ದ್ರೌಪತಿಯು ದೂತೆಗೆ ತೃಪ್ತಿಪಡಿಸಿ ಭೋಜನಾದಿಮುತ್ತು ರತ್ನದ ವಸ್ತ ವಸ್ತ್ರಗಳೆ ಕೊಟ್ಟಳು 3
ಅಂಬುಜಾಕ್ಷೆ ದ್ರೌಪತಿಯುತಾಂಬೂಲ ಅಡಿಕೆ ಕೊಟ್ಟುಸಂಭ್ರಮದಿ ಆನೆ ಅಂಬಾರಿ ಕೊಟ್ಟಳು 4
ಕುಂತಿದೇವಿ ಮೊದಲಾದವರುಕಾಂತೆಯರ ಪರಿವಾರ ಸಹಿತ ಕಂತುನೈಯನ ಕರೆಯ ಬರಲು ನಿಂತಾರಂತ್ಹೇಳೆ 5
ಪಂಚ ಪಾಂಡವರ ಮಡದಿ ಪಾಂಚಾಲಿ ದೇವಿಯುತಾನು ಕೆಂಚೆಯರಿಂದ ಕೂಡಿಮುಂಚೆ ಬಾಹೋರಂತ್ಹೇಳೆ6
ಪನ್ನಂಗ ಶಯನನ ನೋಡದೆ ಅನ್ನ ಸೊಗಸವಮ್ಮ ನಮಗೆ ಚನ್ನರಂಗಯ್ಯನ ಮುಂದೆ ಇನ್ನು ನೀ ಹೇಳೆ 7
ಮುದ್ದು ರಂಗನಮುಖವ ನೋಡದೆ ನಿದ್ರೆ ಬಾರದಮ್ಮ ನಮಗೆ ಹದ್ದು ವಾಹನನ ಮುಂದೆ ಸುದ್ದಿ ನೀ ಹೇಳೆ 8
ವೀತ ದೋಷ ರಾಮೇಶನ ಪ್ರೀತಿ ಇರಲಿ ಅಂತೆ ಹೇಳಮ್ಮಆತನ ಕಾಣದೆ ಒಂದು ಮಾತು ಸೊಗಸದು 9