ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯದೇವಿ ಜಯದೇವಿ ಜಯ ಆದಿಶಕ್ತಿ| ಜಯಜಯಚಂದ್ರಲೆಮಾತೆ ರವಿಶತ ನಿಜದೀಪ್ತಿ ಪ ಸುರಮುನಿ ಸೇವಿತವಾದಾ ಚಾರುವಿಲಾಸದಲೀ | ಇರುತಿರೆ ನಾರಾಯಣಮುನಿ ಭಕುತಿಗೆ ಪ್ರೇಮದಲೀ | ಕರುಣದಿಭೀಮರಥಿಯಾ ಬಂದು ನೀ ತೀರದಲಿ | ದಾರಿ ತಪ್ಪಿದ ದುರುಳನ ಮರ್ದಿಸಿ ಭೃಮರದಲಿ 1 ಅಂದಿಗಿಂದಿಗೆ ನಿಂತು ಪ್ರಸನ್ನತಿ ಗ್ರಾಮದಲಿ | ದ್ವಂದ್ವಚರಣವ ದೋರಿ ಮುಕುತಿಗೆ ಖೂನದಲಿ | ಬಂದವ ದರ್ಶನ ಸ್ಪರ್ಶನ ಪೂಜನ ಮಾಡುತಲಿ | ಚಂದದಿ ಇಹಪರ ಸುಖವಾ ಪಡೆದರು ಸುಲಭದಲಿ2 ವಿವೇಕ ಹರಿವಾಣದಿ ಭಾವದಾರತಿ ನಿಲಿಸಿ | ತೀವಿದ ಸಮ್ಮಜ್ಞಾನದ ಜ್ಯೋತಿಯ ಪ್ರಜ್ವಲಿಸಿ | ಆವಗುಬೆಳಗುವ ಮಹೀಪತಿ ನಂದನತಾನಮಿಸಿ | ಅನುದಿನ ಅಪರಾಧವ ಕ್ಷಮಿಸಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಂದರು ಹರಿದಾಸರು ಅಲ್ಲಿ | ಗೋವಿಂದನಾಮವ ನೆನೆಯುತಲಿ ಪ ಬರುತಿಹರೂ ಹರುಷಿಪರೂ ತಿರುಪತಿಯಾತ್ರೆಗೆ ಹೋಗುವರು 1 ತಾಳದಲೀ ಮೇಳದಲೀ ಶ್ರೀ ಲೊಲಾಯೆನ್ನುತ ಕುಣಿಯುತಲಿ 2 ನೇಮದಲೀ ಪ್ರೇಮದಲೀ ಗುರು ರಾಮವಿಠಲ ಸಲಹೆನ್ನುತಲಿ 3
--------------
ಗುರುರಾಮವಿಠಲ
ರಾಮಚಂದ್ರನೇ ಪರದೈವನೋ ನಮ್ಮ | ಶಾಮ ಸುಂದರ ಕೃಷ್ಣ ಪರದೈವನಯ್ಯ ಪ ರಾಮಭಕ್ತ ನಿದ್ದೆಡೆಗಾಗಿ ಯದುಕುಲ | ಸ್ವಾಮಿಯ ಶರಣನು ಬಂದ ಕೀರ್ತಿಸುತ | ಪ್ರೇಮದಲೀರ್ವರ ಭಕ್ತಿಯವಾದವು | ನೇಮದಿ ಬೆಳೆಯಿತು ಕೇಳಿ ಸಜ್ಜನರು1 ಚಿಕ್ಕ ತನದಿ ತಾಟಿಕೆಯನು ಕೊಂದು ಮುನಿಮುಖ | ಅಖರದಲಿ ಕಾಯದನಾರು ಹೇಳಯ್ಯ | ಠಕ್ಕಿಸಿ ಬಂದ ಪೂತನಿಅಸುಹೀರಿಜ | ನಕ್ಕಭಯ ನಿತ್ತ ಕೃಷ್ಣ ನೋಡಯ್ಯ2 ಚರಣ ಸೋಕಿಸಿ ಶಿಲೆ ಹೆಣ್ಣವ ಮಾಡುತ | ಹರಧನು ಮುರಿದವ ನಾರು ಹೇಳಯ್ಯಾ | ಮರಗಳಾದವರ ನುದ್ಧರಿಸುತ ಕಂಸಾ | ಸುರಧನು ಹಬ್ಬವ ಗೆದ್ದ ರಂಗೈಯ್ಯಾ3 ನೆರದಿಹ ದೇವ ದಾನವರೋಳುದ್ದಂಡದಿ | ಧರಣಿ ಜೆಯ ತಂದನಾರು ಹೇಳೈಯ್ಯಾ | ವರಚೈದೈ ಘೋಷರ ಭಂಗಿಸಿ ರುಕ್ಮಿಣಿ | ಕರವಿಡಿದೊಯ್ದಿದ ಕೃಷ್ಣ ನೋಡಯ್ಯಾ 4 ವನದೊಳು ಹಣ್ಣವ ನಿತ್ತಂ ಶಬರಿಗೆ | ಚಿನುಮಯ ಪದವಿತ್ತ ನಾರು ಹೇಳಯ್ಯಾ | ಅನುವರದಲಿ ದ್ರೌಪದಿಯ ಶಾಕದಳ | ವನೆ ಕೊಂಡು ಸುಖವಿತ್ತ ಕೃಷ್ಣ ನೋಡಯ್ಯಾ5 ಜಲ ನಿಧಿಯೊಳಗ ಸೇತುಗಟ್ಟಿಸಿ ವಾನರ | ದಳನಡಿಸಿದ ವೀರನಾರು ಹೇಳಯ್ಯಾ | ಗಳಿಗಿಯೊಳರಿಯದಂದದಿ ಮಧುರ ಜನ | ನೆಲೆಮಾಡಿ ನೀರೋಳಗಿಟ್ಟ ರಂಗೈಯ್ಯಾ6 - ಅಪೂರ್ಣ
--------------
ಕಾಖಂಡಕಿ ಶ್ರೀ ಕೃಷ್ಣದಾಸರು